ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತು ನೂತನ ಪದಾಧಿಕಾರಿಗಳ ಪದಗ್ರಹಣ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾನುವಾರದಂದು ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತು ವಿಜಯಪುರ ಜಿಲ್ಲಾ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ.
ನಗರದ ಸ್ಯಾಟಲೈಟ್ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಹೋಟೆಲ್ ಭವಾನಿ ಸಭಾಂಗಣದಲ್ಲಿ ನಡೆಯುವ ಈ ಸಮಾವೇಶದಲ್ಲಿ ಕನ್ನಡ, ಮರಾಠಿ, ಹಿಂದಿ, ಉರ್ದು, ಗುಜರಾತಿ ಸೇರಿದಂತೆ ವಿವಿಧ ಭಾಷೆಗಳ ಕವಿಗಳು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಅಖಿಲ ಭಾರತೀಯ ಮರಾಠಿ ಸಾಹಿತ್ಯ ಮಹಾಮಂಡಲದ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಗುರಯ್ಯ ರೈ ಸ್ವಾಮಿ ಉದ್ಘಾಟಿಸುವರು.
ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತು ರಾಜ್ಯ ಕಾರ್ಯದರ್ಶಿ ಪ್ರಭಾಕರ ಸಲಗರೆ, ಬಾಗಲಕೋಟ ಜಿಲ್ಲಾ ಅಧ್ಯಕ್ಷೆ ಕವಯಿತ್ರಿ ಸುಧಾ ಬೆಟಗೇರಿ ಚಿಕ್ಕೋಡಿ ಅಧ್ಯಕ್ಷೆ ಕವಯಿತ್ರಿ ಲತಾ ಮಾನೆ, ಸಂಕೇಶ್ವರ್, ಕವಿ ಪ್ರಕಾಶಸಿಂಗ ರಜಪೂತ ಸೇರಿದಂತೆ ಈ ಭಾಗದ ಖ್ಯಾತ ಕವಿಗಳು ಭಾಗವಹಿಸಲಿದ್ದು, ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತು ವಿಜಯಪುರ ಜಿಲ್ಲಾಧ್ಯಕ್ಷ ದೀಪಕ ಶಿಂತ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಜಯಪುರ ಜಿಲ್ಲಾ ಪದಾಧಿಕಾರಿ ಡಾ.ಸದಾಶಿವ ಪವಾರ್ ಉಪಾಧ್ಯಕ್ಷರು, ಕನ್ಹಯ್ಯಾ ಪೇಠಕರ್ ಮುಖ್ಯ ಕಾರ್ಯದರ್ಶಿ, ಪ್ರೊ.ಗಂಗಾಧರ ಗೆಂಡ, ಸಹಕಾರ್ಯದರ್ಶಿ ಸುಧಾಕರ ಶಿಂಧೆ ಕೋಶಾಧ್ಯಕ್ಷ ಡಾ. ಎಸ್.ಜೆ. ಜಾಗೀರದಾರ, ಶ್ರೀಪಾದ ಪಾಟಣಕರ್, ಶ್ರೀಮತಿ. ರೂಪಾ ಹಿಬಾರೆ, ಪ್ರೊ.ರೇಖಾ ಅಧ್ಯಾಪಕ, ಪ್ರೊ. ರೇವತಿ ಕಟ್ಟಿ, ಪ್ರೊ.ಉಲ್ಕಾ ಜಾಧವ ಅವರನ್ನು ಸನ್ಮಾನಿಸಲಾಗುವುದು
ಈ ಬಹುಭಾಷಾ ಕವಿಗೋಷ್ಠಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ದೀಪಕ ಶಿಂತ್ರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

