ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಭಾರತರತ್ನ, ಸಂವಿಧಾನ ಶಿಲ್ಪಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಿ, ಪೌರತ್ವ ರದ್ದುಗೊಳಿಸಿ, ದೇಶದ್ರೋಹಿ ಆರೋಪದಡಿ ಬಂಧಿಸಿ, ಗಡಿಪಾರು ಮಾಡುವಂತೆ ಸಾಮೂಹಿಕ ದಲಿತ ಸಂಘಟನೆಗಳ ಒಕ್ಕೂಟ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿ ಒತ್ತಾಯಿಸಿದೆ. ದೇಶದ ದೇಗುಲವಾದ ಸಂಸತ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ನೀಡಿ ಕೋಟ್ಯಂತರ ಅಂಬೇಡ್ಕರ್ ಅಭಿಮಾನಿಗಳ ಭಾವನೆಗಳಿಗೆ ಘಾಸಿ ಉಂಟು ಮಾಡಿರುತ್ತಾರೆ. ಗೃಹ ಸಚಿವರು ತಮ್ಮ ಜವಾಬ್ದಾರಿಯನ್ನು ಮರೆತು ಮಾತನಾಡಿರುವುದು ಅಕ್ಷಮ್ಯ ಅಪರಾಧ, ಕೂಡಲೇ ಪ್ರಧಾನಮಂತ್ರಿ ಗೃಹ ಸಚಿವ ಅಮಿತ್ ಶಾ ರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದವರು, ಕೋಮುವಾದಿಗಳ ಒತ್ತಡಕ್ಕೆ ಮಣಿದ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ಕುರಿತು ಭಾರತದ ರಾಷ್ಟ್ರಪತಿಗಳು ಹಾಗೂ ಪ್ರಧಾನಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ, ಸುರುಪುರ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪರುಶುರಾಮ ಬಳಬಟ್ಟಿ, ಲಾಲಪ್ಪ ಹೊಸ್ಮನಿ, ಬಸವರಾಜ ಚಿಂಚೋಳಿ, ಬಸವಣ್ಣೆಪ್ಪ ಮಾಳಳ್ಳಿಕರ್, ಸುರೇಶ ಮಾಳಳ್ಳಿಕರ್, ಮಡಿವಾಳಪ್ಪ ಕಿರದಳ್ಳಿ, ಶರಣು ಹೂವಿನಹಳ್ಳಿ, ಅಂಬ್ರೇಶ ಬೊಮ್ಮನಹಳ್ಳಿ, ಶಿವಪ್ಪ ಕುಂಬಾರ, ಯಲ್ಲಪ್ಪ ಬಾವಿಮನಿ, ಮರೆಪ್ಪ ಮಲ್ಲಾ, ಗೋಪಾಲ ಕರಡಕಲ್, ಖಂಡಪ್ಪ ಯಾಳಗಿ, ರಜಾಕ್ ಸಾಸನೂರ್, ಬಂದೇನವಾಜ್ ನಾಲತವಾಡ, ಎಚ್ಚ್ ಆರ್ ಬಡಿಗೇರ್, ನಹಿಮ್ ಖಾಜಿ, ಅಕ್ಬರ್ ದಫೇದಾರ್ ಸೇರಿದಂತೆ ಇತರರಿದ್ದರು.
ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು, ಪೋಲೀಸ್ ಇಲಾಖೆ ಮುಂಜಾಗ್ರತೆ ಕ್ರಮವಾಗಿ ಬಿಗಿ ಭದ್ರತೆ ಒದಗಿಸಲಾಗಿತ್ತು.