ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ಮಹಾಶಿವರಶರಣ ವೃತ್ತಗಳನ್ನು ನಿರ್ಮಾಣ ಮಾಡುವುದರಿಂದ ಅವರ ಜೀವನ ಚರಿತ್ರೆಗಳನ್ನು ಮೆಲಕು ಹಾಕಿದಂತಾಗುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ಜೇವರಗಿ ರಸ್ತೆಯಲ್ಲಿರುವ ಮೋರಟಗಿ ನಾಕಾ ಬಳಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ನೂತನ ವೃತ್ತವನ್ನು ಉದ್ಘಾಟಿಸಿ ಮಾತನಾಡಿ, ಶರಣರ ಆಚಾರ-ವಿಚಾರ ಮುಂದಿನ ಯುವ ಪೀಳಿಗೆಗೆ ರವಾನಿಸುವ ಅವಶ್ಯಕತೆಯಿದೆ. ಶರಣರ ವೃತ್ತಗಳನ್ನು ಮಾಡುವುದರಿಂದ ಯುವ ಜನಾಂಗಕ್ಕೆ ಅವರ ಬಗ್ಗೆ ತಿಳಿಯುತ್ತಿದೆ. ಅವರ ತತ್ವಾದರ್ಶಗಳನ್ನು ತಿಳಿಯಲು ಸಹಾಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾದ್ಯಕ್ಷ ರಾಜಣ್ಣ ನಾರಾಯಣಕರ, ಮಾಜಿ ಅದ್ಯಕ್ಷ ಹಾಲಿ ಸದಸ್ಯ ಬಾಷಾಸಾಬ ತಾಂಬೋಳಿ, ಎಂ.ಎ.ಖತೀಬ, ದಸಂಸ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ, ಯೋಜನಾ ಪ್ರಾಧಿಕಾರ ಸದಸ್ಯ ಅಂಬರೀಶ ಚೌಗಲೆ, ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ ಅಲ್ಲಾಪುರ, ಮಹಾನಂದ ಬಮ್ಮಣ್ಣಿ, ಶಾಮಲಾ ಮಂದೇವಾಲಿ, ಶೈಲಜಾ ಸ್ತಾವರಮಠ, ಪ್ರತಿಭಾ ಚಳ್ಳಗಿ, ಭೋವಿ ಸಮಾಜದ ತಾಲೂಕಾಧ್ಯಕ್ಷ ಪಂಡಿತ ಯಂಪೂರೆ, ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಭೀಮು ವಾಲೀಕಾರ, ಭೋವಿ ಸಮಾಜದ ಮುಖಂಡರಾದ ಕೊಳ್ಳಪ್ಪ ಚಾಕರೆ, ಭೀಮಾಶಂಕರ ಯಂಪೂರೆ, ದಿಲೀಪ ಆಲಕುಂಟೆ, ಬಾಲಪ್ಪ ಶಿರವಾಳ, ತಿರುಪತಿ ಬಂಡಿವಡ್ಡರ, ರವಿ ಬಂಡಿವಡ್ಡರ, ಪರಸುರಾಮ ಯಂಪೂರೆ, ರವಿ ಚಾಕರೆ, ಶಿವಾಜಿ ಗೊಳಸಾರ, ಮುತ್ತು ಆಲಕುಂಟೆ, ರಾಮು ಬಂಡಿವಡ್ಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಮುತ್ತಪ್ಪ ಪಾತ್ರೋಟಿ ಸ್ವಾಗತಿ ಕೊನೆಯಲ್ಲಿ ವಂದಿಸಿದರು.