5 ಕಿ.ಮೀ ಓಟದಲ್ಲಿ ಪತ್ನಿ – ಪುತ್ರನೊಂದಿಗೆ ಪಾಲ್ಗೊಳ್ಳುತ್ತಿರುವ ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಹಿರಿಯ ಪತ್ರಕರ್ತ ಅಲ್ಲಮಪ್ರಭು ಜಿ ಮಲ್ಲಿಕಾರ್ಜುನಮಠ ತಮ್ಮ ಪತ್ನಿ ಮತ್ತು ಪುತ್ರನ ಜೊತೆ ರವಿವಾರ ನಗರದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ವೃಕ್ವೊತ್ಥಾನ ಹೆರಿಟೇಜ್ ರನ್-೨೦೨೪ರ 5 ಕಿ.ಮೀ ಓಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮಲ್ಲಿಕಾರ್ಜುನಮಠ ಅವರ ಪತ್ನಿ ಭುವನೇಶ್ವರಿ ಮೇಲಿನಮಠ ಬೆಂಗಳೂರಿನ ಯಲಹಂಕದಲ್ಲಿರುವ ಬಿ.ಎಂ.ಎಸ್.ಐ.ಟಿ ಎಂಜನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಈ ದಂಪತಿಯ ಪುತ್ರ ಜಯವಿಹಾನ ಎ. ಮಲ್ಲಿಕಾರ್ಜುನಮಠ ಕೂಡ ಈ ಓಟದಲ್ಲಿ ಭಾಗವಹಿಸುವ ಮೂಲಕ ಕುಟುಂಬ ಸಮೇತ ಓಟದಲ್ಲಿ ಪಾಲ್ಗೊಳ್ಳುತ್ತಿರುವವರ ಸಾಲಿಗೆ ಸೇರಿದ್ದಾರೆ.
36ನೇಯ ಅಂತರಾಷ್ಟ್ರೀಯ ಮ್ಯಾರಥಾನ್
ಹಿರಿಯ ಪತ್ರಕರ್ತ ಅಲ್ಲಮಪ್ರಭು ಜಿ ಮಲ್ಲಿಕಾರ್ಜುನಮಠ ಅವರು ಈ ಮೊದಲು ದೇಶ – ವಿದೇಶಗಳಲ್ಲಿ ಜರುಗಿದ ಹಲವಾರು ಅಂತರರಾಷ್ಟ್ರೀಯ ಮ್ಯಾರಥಾನ್ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಕ್ರೀಡಾಪ್ರೇಮ ಮೆರೆದಿದ್ದಾರೆ.
ಸಮಾಜಮುಖಿ ದೋರಣೆಯ, ನಿರ್ಭಿಡೆ ಮನೋಭಾವದ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಅವರು ಈಗಾಗಲೇ ಸಿಂಗಾಪುರ, ಮಲೇಶಿಯಾ, ದುಬೈ, ಮಾರಿಷಸ್, ಮ್ಯಾನ್ಮಾರ್, ಪಾಂಡಿಚೇರಿ, ಸಿಮ್ಲಾ, ಗೋವಾ, ಮಸೂರಿ, ಮುಳ್ಳಯ್ಯನಗಿರಿ, ಡೆಹ್ರಾಡೂನ್ ಹಾಗೂ ಡಾರ್ಜಿಲಿಂಗ್ ಸೇರಿದಂತೆ ದೇಶ-ವಿದೇಶಗಳಲ್ಲಿ ಈವರೆಗೆ ಜರುಗಿದ 36 ಅಂತರರಾಷ್ಟ್ರೀಯ ಮ್ಯಾರಥಾನ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ.