ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಉಕ್ಕಲಿ ರಸ್ತೆಯಲ್ಲಿರುವ ಪಂಚಾಯಿತಿಯ ಕೆರೆ ಅಭಿವೃದ್ಧಿ ಕಾಮಗಾರಿಗೆ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಶನಿವಾರ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದ ಅವರು, ಈ ಕೆರೆಯನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ೨೦೨೪-೨೫ ನೇ ೪೭೦೨ ಕೆರೆಗಳ ಸುಧಾರಣೆ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಅಂದಾಜು ರೂ. ೪.೪೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಜೊತೆಗೆ ಜನರಿಗೆ ವಾಯು ವಿಹಾರ ಮಾಡುವ ಟ್ರ್ಯಾಕ್, ಮಕ್ಕಳಿಗೆ ಆಟಿಕೆ ಸಾಮಾನುಗಳು, ಜನರಿಗೆ ಅನುಕೂಲವಾಗುವ ಸರಳ ವ್ಯಾಯಾಮ ಸಾಮಾನುಗಳ ಅಳವಡಿಕೆ, ವೀಕ್ಷಣೆ ಮಂಟಪ, ಉದ್ಯಾನವನ ಸೇರಿದಂತೆ ಉತ್ತಮವಾದ ತಾಣವನ್ನಾಗಿ ರೂಪಿಸಲಾಗುವದು. ಈ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸಚಿವರು ಸೂಚಿಸಿದ ಅವರು, ಈಗಾಗಲೇ ಮನಗೂಳಿ ಪಟ್ಟಣದಲ್ಲಿ ಸಿಸಿ ರಸ್ತೆ ಕಾಮಗಾರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ, ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡ, ಡಾ.ಬಾಬು ಜಗಜೀವನರಾಮ ಭವನ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಪಟ್ಟಣವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲಾಗುತ್ತಿದೆ. ಪಟ್ಟಣದ ಜನರು ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಎಇಇ ವಿಜಯಕುಮಾರ ವಸ್ತ್ರದ, ಇಇ ಶಾಂತವೀರ ಕೊಳ್ಳಿ, ಸೆಕ್ಷನ್ ಆಫೀಸರ್ ವಿಜಯಕುಮಾರ ಸುಣದಾಳ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಬ್ಬೀರ ರೇವೂರಕರ, ಮುಖಂಡರಾದ ಚಂದ್ರಶೇಖರಗೌಡ ಪಾಟೀಲ, ಬಸವರಾಜ ಸೋಮಪುರ, ವಿಶ್ವನಾಥಗೌಡ ಪಾಟೀಲ, ಶಿವನಗೌಡ ಗುಜಗೊಂಡ, ಸಲೀಂ ಒಂಟಿ, ಅಜು ಇನಾಮದಾರ, ಬಸಗೊಂಡಪ್ಪ ಚಿಮ್ಮಲಗಿ, ಪರಶು ಬಿದರಿ, ರಮೇಶ ತೊರವಿ, ಶಿವಾನಂದ ಉಕಮನಾಳ, ವಿಶ್ವನಾಥ ಕೊಳ್ಳಿ, ತಿಪ್ಪಣ್ಣ ಜಾನಕರ ಪಟ್ಟಣ ಪಂಚಾಯಿತಿ ಸದಸ್ಯರಾದ ಭಾಗ್ಯರಾಜ ಸೊನ್ನದ, ಸಲೀಂ ಮಕಾನದಾರ, ಡಾ.ಎಂ.ಡಿ.ಮೇತ್ರಿ, ಡಾ.ರಾಮಚಂದ್ರ ಪತ್ತಾರ, ಪ್ರದೀಪ(ಅಜೀತ) ಜಾನಕರ, ವಿಜಯಕುಮಾರ ರಜಪೂತ, ಮಹಾಂತಪ್ಪ ಗುಜಗೊಂಡ, ಮೈನುದ್ದೀನ ಕೊತ್ವಾಲ, ಬಸವರಾಜ ಬುರ್ಲಿ, ರಾಜಶೇಖರ ವಾಲೀಕಾರ, ಗುತ್ತಿಗೆದಾರ ಎಸ್.ಡಿ.ಪವಾರ ಇತರರು ಇದ್ದರು.