ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಶೀತ ಗಾಳಿ ಬೀಸುವುದರಿಂದ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕಂದಾ ಇಲಾಖೆಯ ಸ್ವಾಯತ್ತ ಸಂಸ್ಥೆ) ರವರು ವಿಜಯಪುರ ಜಿಲ್ಲೆಯಲ್ಲಿ ತೀವ್ರವಾದ ಶೀತಗಾಳಿ ಬೀಡುವ ಸಾಧ್ಯತೆಯಿರುತ್ತದೆ ತಾಪಮಾನ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿರುತ್ತಾರೆ. ಇದರ ಹಿನ್ನೆಲೆ ಸಾರ್ವಜನಿಕರು ಬೆಳಿಗ್ಗೆ ಸೋಯೋದಯಕ್ಕಿಂತ ಮುಂಚೆ ಹಾಗೂ ಸೂರ್ಯಾಸ್ತದ ನಂತರ ವಾಕಿಂಗ್ ಮಾಡುವವರು ಮುನ್ನೆಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರಿಗೆ ತಿಳಿಸಬೇಕೆಂದು ನಗರದ ಕಾಂಗ್ರೇಸ್ ಮುಖಂಡ ಅಬ್ದುಲ್ ಹಮಿದ ಮುಶ್ರೀಫ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಹಾಗೂ ಬೆಳಿಗ್ಗೆ ೭ ಘಂಟೆಗೆ ಪ್ರಾರಂಭವಾಗುವ ಶಾಲೆಯ ಸಮಯವನ್ನು ಬದಲಿಸಿ ೨ ಗಂಟೆಗೆ ಲೇಟ್ ಆಗಿ ಪ್ರಾರಂಭಿಸಬೇಕು. ಇದರಿಂದ ಮಕ್ಕಳ ಆರೋಗ್ಯ ಸುಧಾರಿಸಬಹುದು. ಮಕ್ಕಳ ಶಾಲೆಗೆ ಕಳುಹಿಸುವ ಸಲುವಾಗಿ ಪಾಲಕರು ನಸುಕಿನ ಜಾವ ೫ ಘಂಟೆಗೆ ಚಳಿಯಲ್ಲಿ ಎದ್ದು ಅವರ ತಯಾರಿಗಾಗಿ ಶ್ರಮಿಸಬೇಕಾಗುತ್ತದೆ. ಮಕ್ಕಳಿಗೆ ತಯಾರು ಮಾಡಿ ೭ ಘಂಟೆಗೆ ಬಸ್‌ನಲ್ಲಿ ಕಳುಹಿಸದರೆ ನಸುಕಿನ ಜಾವ ತುಂಬಾ ಚಳಿ ಇರುವುದರಿಂದ ಮಕ್ಕಳಿಗೆ ಶೀತ ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ ಆದ ಕಾರಣ ಶಾಲೆಯ ಸಮಯವನ್ನು ೨ ಘಂಟೆ ತಡವಾಗಿ ಪ್ರಾರಂಭಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಶ್ರೀನಾಥ ಪೂಜಾರಿ, ಫಯಾಜ ಕಲಾದಗಿ, ಶಕೀಲ ಸುತಾರ, ಚನ್ನು ಕಟ್ಟಿಮನಿ, ತಾಜೀಂಪೀರ ಜಹಾಗೀರದಾರ, ಹಾಜಿ ಪಿಂಜಾರ, ಸಾಜೀದ ಬಾಗವಾನ, ಬಾಲಾಜಿ ಕಾಂಬಳೆ ಮುಂತಾದವರು ಇದ್ದರು.