ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಲ್ಪಸಂಖ್ಯಾತ ಮುಸ್ಲಿಮರ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಸಮುದಾಯದ ಜನರು ಭಾಗವಹಿಸಿ, ಅಂಬೇಡ್ಕರ್ ಅವರ ಗೌರವವನ್ನು ಕಾಪಾಡುವ ಸಲುವಾಗಿ ಸರ್ಕಾರದಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಮಿತಿಯ ಮುಖಂಡ ಸೈಯದ್ ಜೈನುಲ್ ಅಬಿದಿನ್ ಮಾತನಾಡಿ, “ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಶಿಲ್ಪಿ ಮಾತ್ರವಲ್ಲ, ಸಮಾನತೆ ಮತ್ತು ನ್ಯಾಯದ ಪರಿಕಲ್ಪನೆಯನ್ನು ಆಳವಾಗಿ ಬಿಂಬಿಸಿದ ವ್ಯಕ್ತಿ. ಅವರ ಕುರಿತು ಇಂತಹ ಹೇಳಿಕೆ ತೀವ್ರವಾಗಿ ಖಂಡನೀಯ” ಎಂದು ಹೇಳಿದರು.
ಮುಖಂಡರಾದ ಅಕ್ರಂ ಮಾಶಾಳಕರ, ಇರ್ಫಾನ್ ಶೇಖ, ಹಫಿಜ್ ಸಿದ್ದಿಕಿ ಮಾತನಾಡಿದರು.
ಪ್ರತಿಭಟನೆಯ ನಂತರ, ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಮುನ್ನಾ ಬಕ್ಷಿ ಕುಲದೀಪ್ ಪೋತಿವಾಲ್, ಇಖಲಾಸ್ ಸುನೇವಾಲೆ, ಒ. ಂ. ಪಿರಾಂ ವಕೀಲರು, ಇಮ್ರಾನ್ ಜಹಾಗಿರದಾರ, ಹಿದಾಯತ್ ಮಾಶಾಳಕರ್, ಇಂಮ್ತಿಯಾಜ್ ಮುಲ್ಲಾ, ಹಬ್ಬು ಅಂಬಾರಖಾನೆ, ಅತಿಕ್ ನಾಲ್ಬಂದ, ಮುಸ್ತಫಾ ಆಲಮೇಲ, ಮುನ್ನಾ ಮುಲ್ಲಾ, ನಿಜಾಮ್ ಹರಿಯಾಲ್, ಮುನಾಫ್ ಪಠಾಣ್, ಹಮೀದ್ ಅವಟಿ, ಖ್ವಾಜಾ ಮಂದಾಪುರ್, ಹನ್ನಾನ ಶೇಖ, ಸಾದಿಕ್ ಇಮಾರತವಾಲೆ, ತೌಸಿಫ್ ಇನಾಮದಾರ, ಮಹಮ್ಮದ ಇಕಬಾಲ್ ಮೊಮೀನ, ಆಶೀಫ ಮುರಸಾವಳಗಿ, ಮಹಮ್ಮದ ಸಾಬಿರ, ಬಾಶಾ ದೆಗಿನಾಳ, ದಾನಿಶ ಉಕಲಿ, ರವೂಫ ಕಾಲೆಬಾಗ, ಮಾಜಿದ ಇನಾಮದಾರ ಮುಂತಾದವರು ಉಪಸ್ಥಿತರಿದ್ದರು.