ಪ್ರಗತಿಪರ ಚಿಂತಕರು, ಅಂಬೇಡ್ಕರ ಅಭಿಮಾನಿಗಳಿಂದ ಪ್ರತಿಭಟನೆ | ಷಾ ಪ್ರತಿಕೃತಿ ದಹಿಸಿ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಇಂಡಿ : ಡಾ.ಬಿ.ಆರ್.ಅಂಬೇಡ್ಕರ ಅವರ ಬಗ್ಗೆ ಹಗುರವಾಗಿ ,ಅವಮಾನಕರ ಹೇಳಿಕೆ ನೀಡಿರುವ ಗೃಹ ಸಚಿವ ಅಮಿತ ಷಾ ಅವರು ಕೂಡಲೆ ದೇಶದ ಜನತೆಯ ಕ್ಷಮೆ ಕೊರಬೇಕು. ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಪ್ರಗತಿಪರ ಚಿಂತಕರು ಹಾಗೂ ಅಂಬೇಡ್ಕರ ಅಭಿಮಾನಿಗಳು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ಟಿಪ್ಪುಸುಲ್ತಾನ, ಬಸವೇಶ್ವರ, ಅಂಬೇಡ್ಕರ, ಮಹಾವೀರ ವೃತ್ತಗಳ ಮೂಲಕ ನಡೆದು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ, ಟಾಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ ಕೇಂದ್ರ ಸಚಿವ ಅಮಿತ ಷಾ ಅವರ ಪ್ರತಿಕೃತಿ ದಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಎಸ್ಎಸ್ ಸಂಚಾಲಕ ರಮೇಶ ನಿಂಬಾಳಕರ, ಸತ್ತಾರ ಬಾಗವಾನ, ಜಟ್ಟೆಪ್ಪ ರವಳಿ, ಇಲಿಯಾಸ ಬೊರಾಮಣಿ, ಸದಾಶಿವ ಪ್ಯಾಟಿ, ಭೀಮಣ್ಣ ಕವಲಗಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಅವರು, ರಾಜ್ಯಸಭೆಯಲ್ಲಿ ಅಂಬೇಡ್ಕರ್ ಅವರ ಬಗ್ಗೆ ಅವಮಾನಕರ ಹೇಳಿಕೆ ನೀಡಿರುವ ಗೃಹ ಸಚಿವ ಅಮಿತ್ ಶಾ ಅವರು ಈ ಕೂಡಲೇ ಕ್ಷಮೆಯಾಚಿಸಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವುದನ್ನು ಈ ದೇಶ ಸಹಿಸುವುದಿಲ್ಲ.ಸಂವಿಧಾನ ಶಿಲ್ಪಿ ಅಂಬೇಡ್ಕರ್ ದೇಶಕ್ಕೆ ಹೊಸ ದಿಕ್ಕು ತೋರಿಸಿದವರು. ಅಂಬೇಡ್ಕರ್ ಅವರಿಗೆ ಅಥವಾ ಅವರು ರಚಿಸಿರುವ ಸಂವಿಧಾನಕ್ಕೆ ಅವಮಾನ ಮಾಡಿದರೆ ಈ ದೇಶದ ಜನ ಸಹಿಸುವುದಿಲ್ಲ. ತಕ್ಷಣ ಗೃಹ ಸಚಿವರು ಕ್ಷಮೆಯಾಚಿಸಬೇಕು. ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ನಂತರ ಪ್ರತಿಭಟನಾಕಾರರು ತಾಲೂಕು ಆಡಳಿತ ಸೌಧಕ್ಕೆ ತೆರಳಿ ಧರಣಿ ನಡೆಸಿದರು. ನಂತರ ಎಸಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.
ಪಾಪು ಕಿತ್ತಲಿ, ದಸ್ತಗೀರ ಮುಲ್ಲಾ, ಪ್ರಶಾಂತ ಕಾಳೆ, ವಿನಾಯಕ ಗುಣಸಾಗರ, ಸೋಮು ಮ್ಯಾಕೇರಿ, ಭೀಮಾಶಂಕರ ಮೂರಮ, ಹುಚ್ಚಪ್ಪ ತಳವಾರ, ಸಣ್ಣಪ್ಪ ತಳವಾರ ಮಾತನಾಡಿದರು.
ನಿರ್ಮಲಾ ತಳಕೇರಿ,ಶೈಲಜಾ ಜಾದವ, ಸಂಜೀವ ಚವ್ಹಾಣ, ರೈಸ್ ಅಸ್ಟೇಕರ, ಜಾವೀದ ಮೋಮಿನ, ರಾಜಶೇಖರ ಹಳ್ಳದಮನಿ, ವಿಕಾಶ ಹೊಸಮನಿ, ಕಲ್ಲು ಅಂಜುಟಗಿ, ಮಿಲಿಂದ ಹೊಸಮನಿ,ಶೇಖರ ಶಿವಶರಣ, ಮಲ್ಲು ಮಡ್ಡಿಮನಿ, ಆನಂದ ಕಾಂಬಳೆ, ಆನಂದ ಇಂಗಳಗಿ, ರಾಮಚಂದ್ರ ದೊಡಮನಿ, ರವಿ ನಡಗಡ್ಡಿ, ಅವಿನಾಶ ಬಗಲಿ, ಸಂತೋಷ ಪರಸೆನವರ, ಶಿವಯೋಗೆಪ್ಪ ಮಾಡ್ಯಾಳ, ವಿಠಲ ಗಾಯಕವಾಡ, ಪೀರಪ್ಪ ಕಟ್ಟಿಮನಿ, ಉತ್ತಮ ಕಟ್ಟಿಮನಿ, ನಾಗೇಶ ತಳಕೇರಿ, ಬಾಬು ಗುಡಮಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.