ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮೈಸೂರ ಮುಕ್ತ ವಿಶ್ವವಿದ್ಯಾಲಯದದಲ್ಲಿ ಡಿ.೨೩ರಂದು ವಿಶ್ವ ರೈತ ದಿನಾಚರಣೆ, ರಾಜ್ಯ ಮಟ್ಟದ ರೈತರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕುರಬೂರ ಶಾಂತಕುಮಾರ ಅವರ ನೇತೃತ್ವದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ, ಕಬ್ಬಿನ ಇಳುವರಿ ಮತ್ತು ತೂಕದ ಮೋಸ, ತೊಗರಿ ಬೆಳೆಯ ವಿಫಲತೆ, ಬೆಳೆ ವಿಮೆ ಪರಿಹಾರ, ಏಕಾಏಕಿ ತೊರಗಿ ಬೆಲೆಯಲ್ಲಿ ಇಳಿಕೆ ಸೇರಿದಂತೆ ರೈತರ ಹಲವಾರು ಸಮಸ್ಯೆಗಳಲ್ಲಿ ಸಿಲುಕಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸದರಿ ಮೈಸೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಕೀಟನಾಶಕಗಳ ಬೆಲೆ ಏರಿಕೆ ಮತ್ತು ಇತರ ಸಮಸ್ಯೆಗಳ ಪರಿಹಾರಕ್ಕಾಗಿ ಧ್ವನಿ ಎತ್ತಬೇಕಿದೆ. ಕಾರಣ ಆಲಮೇಲ, ದೇವರ ಹಿಪ್ಪರಗಿ ಹಾಗೂ ಸಿಂದಗಿ ತಾಲೂಕಿನ ರೈತರು, ವಿವಿಧ ಸಂಘಟನೆಯ ಮುಖಂಡರು ಡಿ.೨೩ರಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಿಂದಗಿ ಕಬ್ಬು ಬೆಳೆಗಾರರ ಸಂಘದ ತಾಲೂಕಾಧ್ಯಕ್ಷ ಧರೆಪ್ಪಗೌಡ ಬಿರಾದಾರ ವಿನಂತಿಸಿದ್ದಾರೆ.

