ಉದಯರಶ್ಮಿ ದಿನಪತ್ರಿಕೆ
ಆಲಮೇಲ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿ ವಿಜಯಪುರ ಇವರ ವತಿಯಿಂದ ಪಟ್ಟಣದಲ್ಲಿ ನಿಯೋಜಿತ ಹಿರೇಮಠ ತೋಟದ ವಸತಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ವತಿಯಿಂದ ಗ್ರಾಮ ಸಭೆ ಮಾಡಲಾಯಿತು
ಈ ಸಭೆಯನ್ನು ಉದ್ದೇಶಿ ಸಂಘದ ಕ್ಯಾಂಪ್ ಆಫೀಸರ್ ಎಸ್ ಎಸ್ ಅಥಣಿ ಮಾತನಾಡಿ, ದಕ್ಷಿಣ ಭಾರತದಲ್ಲಿ ಅತ್ಯಧಿಕವಾಗಿ ಹಾಲು ಉತ್ಪಾದನೆ ಮಾಡುವುದರಲ್ಲಿ ನಂದಿನಿ ಅಗ್ರಸ್ಥಾನದಲ್ಲಿದೆ. ನಂದಿನಿ ಎಲ್ಲದರಲ್ಲೂ ಉತ್ತಮವಾಗಿದೆ. ನಮ್ಮಲ್ಲಿ ಅನೇಕ ಉತ್ಪನಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುತ್ತವೆ. ಇದರ ಹಿಂದೆ ರೈತರ ಸಹಕಾರ ಬಹಳ ಮುಖ್ಯವಿದೆ. ಈ ಭಾಗದಲ್ಲಿ ಹಾಲು ಉತ್ಪಾದನೆ ಸಹಕಾರ ಸಂಘ ಸ್ಥಾಪನೆ ಮಾಡಲು ನೀವೆಲ್ಲರ ಸಹಕಾರ ಅಗತ್ಯವಿದೆ. ನೀವು ಪ್ರತಿಯೊಂದು ಮನೆಯಲ್ಲೂ ಹೈನುಗಳ ಸಾಕಾಣಿಕೆ ಮಾಡಬೇಕು. ಇದರಿಂದ ನಿಮಗೂ ಅನುಕೂಲ ಮತ್ತು ನಿಮ್ಮ ಉಪಜೀವನಕ್ಕೆ ಸಹಕಾರವಾಗಲಿದೆ ಆದ್ದರಿಂದ ನೀವು ಎಲ್ಲರೂ ನಮಗೆ ಹಾಲು ನೀಡಿ ನಾವು ನಿಮ್ಮ ಹಾಲು ಉತ್ತಮ ಬೆಲೆಗೆ ಕೊಂಡು ಕೊಳ್ಳಲಿದ್ದೇವೆ ಎಂದು ಹೇಳಿದರು.
ಸಾನಿದ್ಯ ವಹಿಸಿದ ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ ನಾವು ಹೈನುಗಾರಿಕೆ ಮಾಡುವುದರಿಂದ ನಮ್ಮ ಉಪಜೀವನ ಸಾಗಿಸುವದರ ಜೊತೆಗೆ ಸಾವಯುವ ಕೃಷಿಗೆ ಅನುಕಲವಾಗಲಿದೆ. ಈಗಿನ ಯುವಕರು ಬೆಳಿಗ್ಗೆ ಮತ್ತು ಸಂಜೆ ಕಟ್ಟಿ ಮೇಲೆ ಕುಳಿತು ಹರಟೆ ಹೊಡೆಯುವದು ಬಿಟ್ಟು ಒಂದು ತಾಸು ಈ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಒಂದು ತಾಸಿನ ದುಡಿತ ಒಂದು ದಿನದ ಖರ್ಚು ತಗೆಯಬಹುದು. ನಾವು ಈ ಒಕ್ಕೂಟದವ ಜೊತೆ ಕೈ ಜೋಡಿಸಿ ನಾವು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳೋಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಆಲಮೇಲ ಅರ್ಜುಣಗಿ ಮಠದ ಸಂಗನಬಸವ ಶಿವಾಚಾರ್ಯರು, ಒಕ್ಕೂಟದ ಫೀಲ್ಡ ಆಫೀಸರ್ ಆದ ಚೌಡಿಹಾಳ ರೈತ ಮುಖಂಡ ಶ್ರೀಮಂತ ದುದ್ದಗಿ, ಸಾವಯುವ ಕೃಷಿಕ ಸುನಿಲ ನಾರಾಯಣಕರ, ಪ್ರಶಾಂತ ನಾಶಿ, ರತನ(ಟಾಟ) ಒನಕುದರಿ, ಸಿದ್ದು ಮುಗಳಿ, ಅಶ್ವಥ ಪತ್ತಾರ ಮುಂತಾದವರು ಇದ್ದರು

