Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಪ್ರಶಸ್ತಿಗಳು ಪುರಸ್ಕೃತನ ಜವಾಬ್ದಾರಿ ಹೆಚ್ಚಿಸಬೇಕು :ಡಾ.ಪ್ರಭುಗೌಡ
(ರಾಜ್ಯ ) ಜಿಲ್ಲೆ

ಪ್ರಶಸ್ತಿಗಳು ಪುರಸ್ಕೃತನ ಜವಾಬ್ದಾರಿ ಹೆಚ್ಚಿಸಬೇಕು :ಡಾ.ಪ್ರಭುಗೌಡ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ತನು ಕನ್ನಡ ಮನ ಕನ್ನಡ ಪ್ರಶಸ್ತಿ ಪ್ರದಾನ ಹಾಗೂ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಪ್ರಶಸ್ತಿಗಳನ್ನು ನೀಡುವುದರ ಉದ್ಧೇಶ ಕಾರ್ಯ ಮಾಡುವ ವ್ಯಕ್ತಿಯ ಜವಾಬ್ದಾರಿಯನ್ನು ಹೆಚ್ಚಿಸಿ ಇನ್ನೂ ಹೆಚ್ಚಿನ ಜವಾಬ್ದಾರಿಯನ್ನು ನಿಭಾಯಿಸುವುದಕ್ಕೆ ಸಮರ್ಥನನ್ನಾಗಿ ಮಾಡುವುದಾಗಿದೆ. ಪ್ರಶಸ್ತಿ ಪಡೆದುಕೊಳ್ಳುವ ವ್ಯಕ್ತಿಯೂ ತನ್ನ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡು ಕಾರ್ಯ ಮಾಡಬೇಕೆ ಹೊರತು ಪ್ರಶಸ್ತಿ ಪಡೆದುಕೊಂಡಿದ್ದೇನೆಂದು ಮೈ ಮರೆಯಬಾರದು ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ.ಪ್ರಭುಗೌಡ ಬಿ.ಎಲ್ ಹೇಳಿದರು.
ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ತನು ಫೌಂಡೇಷನ್ ವತಿಯಿಂದ ಜರುಗಿದ ತನು ಕನ್ನಡ ಮನ ಕನ್ನಡ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಲೇಖಕ ಮಂಜುನಾಥ ಮ. ಜುನಗೊಂಡ ಅವರು ಬರೆದ ಐದು ಕೃತಿಗಳ ಲೋಕಾರ್ಪಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು; ಸಮಾಜಕ್ಕಾಗಿ ನಿಸ್ವಾರ್ಥವಾಗಿ ದುಡಿದ ಜನಗಳನ್ನು ಗುರುತಿಸಿ ಪ್ರಶಸ್ತಿ ನೀಡಿದರೆ ಅದಕ್ಕೊಂದು ಅರ್ಥ ಬರುತ್ತದೆ. ಅದನ್ನು ಬಿಟ್ಟು ಸಿಕ್ಕ ಸಿಕ್ಕವರಿಗೆಲ್ಲ ಪ್ರಶಸ್ತಿಗಳನ್ನು ನೀಡುತ್ತ ಸಾಗಿದರೆ ಪ್ರಶಸ್ತಿ ಎನ್ನುವ ಪದವೇ ತನ್ನ ಮೌಲ್ಯವನ್ನು ಕಳೆದುಕೊಂಡು ಬಿಡುತ್ತದೆ. ಆ ನಿಟ್ಟಿನಲ್ಲಿ ತನು ಫೌಂಡೇಷನ್ ಬಳಗ ನಿಜವಾದ ಸೇವಕರನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು ಹೆಮ್ಮೆ ಎನಿಸುತ್ತದೆ. ಅದೇ ರೀತಿ ಒಟ್ಟಿಗೆ ಐದು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸುವ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಮಂಜುನಾಥ ಜುನಗೊಂಡ ಅವರ ಕಾರ್ಯ ನಿಜಕ್ಕೂ ಅದ್ಭುತವಾದುದ್ದು. ತಮ್ಮ ಹದವಾದ ವಿಚಾರಗಳಿಗೆ ಹರಿತವಾದ ಲೇಖನಿಯನು ಬಳಸಿಕೊಂಡು ಸಮಾಜದ ಅಂಕುಡೊಂಕುಗಳನ್ನು ತಿದ್ದುವುದರೊಂದಿಗೆ ಸಮಾಜದ ಸಮಸ್ಯೆಗಳಿಗೆ ಮದ್ದರೆಯುವ ಕೆಲಸ ಮಾಡುತ್ತಾರೆ. ಅವರ ಬರವಣಿಗೆಯ ಕಾರ್ಯ ಸದಾ ಹೀಗೆ ಸಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ದೇವರಗುಡ್ಡದ ಧರ್ಮದರ್ಶಿಗಳು ಹಾಗೂ ಖ್ಯಾತ ವೈದ್ಯ ಡಾ.ಸಂದೀಪ ಪಾಟೀಲ, ಬರವಣಿಗೆ ಎನ್ನುವುದು ಸುಲಭಕ್ಕೆ ನಿಲುಕುವ ಕಾರ್ಯವಲ್ಲ. ಯಾರು ಬರವಣಿಗೆಯನ್ನು ತಪಸ್ಸಿನ ರೀತಿ ಆಚರಿಸುತ್ತಾರೋ ಅವರಿಗೆ ಮಾತ್ರ ಅದು ದೊರೆಯುತ್ತದೆ. ಆ ನಿಟ್ಟಿನಲ್ಲಿ ಇಂದು ಮಂಜುನಾಥ ಅವರು ಬರವಣಿಗೆಯ ಮೂಲಕ ತಮ್ಮಲ್ಲಿ ಅಡಗಿರುವ ದೇಶಪ್ರೇಮವನ್ನು ಹೊರ ಹಾಕಿ ನಮಗೆಲ್ಲ ಬದಲಾವಣೆಯ ಗಾಳಿಗೆ ಮೈಯೊಡ್ಡಿ ನಿಲ್ಲುವುದಕ್ಕೆ ಕರೆ ನೀಡಿದ್ದಾರೆ. ಅದರ ಜೊತೆಗೆ ತನು ಫೌಂಡೇಷನ್ ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ನಾಡಿನ ಋಣ ತೀರಿಸುವುದಕ್ಕೆಂದು ದುಡಿಯುತ್ತಿರುವುದು ಶ್ಲಾಘನೀಯವಾಗಿದೆ. ಇವರ ಕಾರ್ಯಕ್ಕೆ ನಾವುಗಳೆಲ್ಲ ಕೈಜೊಡಸಬೇಕು ಎಂದು ಹೇಳಿದರು.
ವೇದಾಂತ ಕಾಲೇಜಿನ ಪ್ರಾಚಾರ್ಯ ಶಾಂತವೀರಯ್ಯ ಮಠ, ಸಮಾಜ ಸೇವಕಿ ವಿಜಯಲಕ್ಷ್ಮಿ ಬಾಳಿ, ಪತ್ರಕರ್ತ ಇಂದುಶೇಖರ ಮಣೂರ, ಚಿತ್ರಾ ಅಷ್ಟಪುತ್ರೆ ಮಾತನಾಡಿದರು.
ಉಪನ್ಯಾಸಕ ಮುಸ್ತಾಕ ಮಲಘಾಣ ಪುಸ್ತಕಗಳನ್ನು ಪರಿಚಯಿಸಿದರು.
ತನು ಫೌಂಡೇಷನ್ ಅಧ್ಯಕ್ಷ ವಿಜುಗೌಡ ಕಾಳಶೆಟ್ಟಿ ಸ್ವಾಗತಿಸಿದರು, ಸಂಗನಬಸವರಾಜ್ ಗುಡ್ಲಮನಿ ನಿರೂಪಿಸಿದರು.

ಪ್ರಶಸ್ತಿ ಪುರಸ್ಕೃತರು

ವಿವಿದ ಕ್ಷೇತ್ರಗಳ ಸಾಧಕರಾದ ಶಂಕರ ಬೈಚಬಾಳ, ಬಸವರಾಜ್ ಯಾದವಾಡ, ಡಾ.ರವೀಂದ್ರ ತೋಟದ, ಕಲ್ಮೇಶ ಆಸಂಗಿ, ಮುತ್ತು ಪಟ್ಟಣಶೆಟ್ಟಿ, ರತ್ನಾ ಜೈನ್, ಸುಜಾತಾ ರೇಶ್ಮಿ, ಗುರು ಕಡಣಿ, ಪೂರ್ಣಿಮಾ ಬಾರಿಮನಿ, ಗೀತಾ ಜಾಧವ ತನು ಕನ್ನಡ ಮನ ಕನ್ನಡ ಪ್ರಶಸ್ತಿ ಸ್ವೀಕರಿಸಿದರು.

“ಪ್ರಶಸ್ತಿಗಳು ಮಾರಾಟಕ್ಕಿರುವ ಈ ದಿನಗಳಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತ ಎಲೆ ಮರೆಯ ಕಾಯಿಯಂತಿರುವ ಅನೇಕ ಸಾಧಕರನ್ನು ಪ್ರತಿ ವರ್ಷವೂ ಗುರುತಿಸಿ, ಅವರಿಗೆ ತಮ್ಮ ಸಾಧನೆಯ ಹಾದಿಗೆ ಇನ್ನಷ್ಟು ಪ್ರೇರಣೆ ನೀಡುವ ದಿಸೆಯಲ್ಲಿ, ಸದಾ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡ ’ತನು ಫೌಂಡೇಶನ್ ವಿಜಯಪುರ’ ಇವರು ಮಾಡುತ್ತಿರುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.”

– ಇಂದುಶೇಖರ ಮಣೂರ
ಜಿಲ್ಲಾ ಉಪಾಧ್ಯಕ್ಷರು
ಕಾರ್ಯನಿರತ ಪತ್ರಕರ್ತರ ಸಂಘ
ವಿಜಯಪುರ

ವಿಜಯಪುರದ ಲೇಖಕ, ವಾಗ್ಮಿ ಮಂಜುನಾಥ ಜುನಗೊಂಡ ರಚಿಸಿದ ’ಬಿಸಿಲೂರ ಭುವಿ ತಾರೆಗಳು’, ’ಪ್ರತಿಬಿಂಬ’, ಪೇಪರ್ ದೋಣಿಯಲ್ಲಿ’, ಬಸವ ಭೂಮಿಯ ಕುಸುಮಗಳು ಸೇರಿದಂತೆ ಐದು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026
    In ದಿನಪತ್ರಿಕೆ
  • ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ
    In (ರಾಜ್ಯ ) ಜಿಲ್ಲೆ
  • ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಕಲಾಶ್ರೀ ಚವ್ಹಾಣ ಗೆ ಅಭಿನಂದಿಸಿದ ಡಾ.ಸುರೇಖಾ
    In (ರಾಜ್ಯ ) ಜಿಲ್ಲೆ
  • ಸಚಿವ ಎಂ. ಬಿ. ಪಾಟೀಲ ಅವರ ಪ್ರವಾಸ ವಿವರ
    In (ರಾಜ್ಯ ) ಜಿಲ್ಲೆ
  • ನ್ಯಾಯ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿಖರ ತನಿಖೆ & ದೃಢ ಸಾಕ್ಷಿ
    In (ರಾಜ್ಯ ) ಜಿಲ್ಲೆ
  • ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದಪೊಲೀಸ್ ಅಧಿಕಾರಿಗಳು
    In (ರಾಜ್ಯ ) ಜಿಲ್ಲೆ
  • ಯಡ್ರಾಮಿ ಬಸವೇಶ್ವರ ಜಾತ್ರೆಯ ಅದ್ದೂರಿ ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾ ಪ್ರಕ್ರಿಯೆಯ ಪ್ರತಿ ಹಂತ ವೀಕ್ಷಿಸಿದ ಜಿ.ಪಂ. ಸಿಇಒ ರಿಷಿ ಆನಂದ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.