ದೇವರಹಿಪ್ಪರಗಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಭೈರವಾಡಗಿ ಗ್ರಾಮದ ಸಂಗಮೇಶ ಕರೆಪ್ಪಗೋಳ ಆಯ್ಕೆಯಾಗಿದ್ದಾರೆ.
ಪಟ್ಟಣದ ಶಾಸಕರ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜರುಗಿದ ಸಭೆಯಲ್ಲಿ ತಾಲ್ಲೂಕು ಕಸಾಪ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ನೇತೃತ್ವದಲ್ಲಿ ಈ ಆಯ್ಕೆ ಮಾಡಲಾಯಿತು.
ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ೧೯೬೫ ರಲ್ಲಿ ಜನಿಸಿದ ಸಂಗಮೇಶ ಕರೆಪ್ಪಗೋಳ ಅತ್ಯಂತ ಕಡು ಬಡತನದಲ್ಲಿ ಜನಿಸಿ ಕೂಲಿ ಕಾರ್ಮಿಕನಾಗಿ ಜೀವಿಸುತ್ತಾ ಎಂಟು ಕೃತಿಗಳನ್ನು ಹೊರತಂದಿದ್ದಾರೆ.
ಜಿಲ್ಲೆಯಲ್ಲಿ ಜರುಗುವ ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಚಲಿತ ವಿಷಯಗಳ ಆಧಾರಿತ ಕವನಗಳನ್ನು ವಾಚಿಸಿ ಸಭಿಕರ ಮನಸ್ಸನ್ನು ಗೆದ್ದುಕೊಂಡಂತಹ ಪ್ರಬುದ್ಧ ಕವಿ ಸಂಗಮೇಶ ಅವರನ್ನು ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಬಂದಿರುವ ಅರ್ಜಿಗಳನ್ನು ತಾಲ್ಲೂಕಿನ ಹಿರಿಯರ ಸಮ್ಮುಖದಲ್ಲಿ ಆಯ್ಕೆಮಾಡಲಾಯಿತು. ತಾಲ್ಲೂಕು ಆಧ್ಯಕ್ಷ ಜಿ.ಪಿ.ಬಿರಾದಾರ ಅನುಮೋದಿಸಿದರು
ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ, ಕಾಶೀನಾಥ ಸಾಲಕ್ಕಿ, ಸೋಮಶೇಖರ ಹಿರೇಮಠ, ಕೆ.ಎಸ್.ಕೋರಿ, ಮುನೀರ್ ಅಹ್ಮದ್ ಮಳಖೇಡ, ಗೋಲ್ಲಾಳ ಬಿರಾದಾರ, ಶಿವಾನಂದ ಕೋಟಿನ್, ನಾಗಯ್ಯ ಹಿರೇಮಠ, ಎಸ್.ಜಿ.ತಾವರಖೇಡ, ಎಸ್.ಆರ್.ನಂದ್ಯಾಳ, ಜಾನು ಗುಡಿಮನಿ, ಸಿದ್ದು ಪಟ್ಟೇದ, ರವೀಂದ್ರ ಕೋಟಿನ್, ಕೆ.ಎಮ್.ನಂದಿ, ಕಾಶಿನಾಥ ತಳಕೇರಿ, ಸಂಗನಗೌಡ ಬಿರಾದಾರ, ಪ್ರಕಾಶ ಮಲ್ಹಾರಿ, ಸಿದ್ದು ಮೇಲಿನಮನಿ, ಸದಾಶಿವ ಗುಡಿಮನಿ, ಪ್ರಕಾಶ ಗುಡಿಮನಿ, ಪಿ.ಸಿ.ತಳಕೇರಿ, ರಾಘವೇಂದ್ರ ಗುಡಿಮನಿ, ಶ್ರೀಕಾಂತ ಬಜಂತ್ರಿ, ಹಣಮಂತರಾಯ ಬಿರಾದಾರ, ಸುಭಾಸ ಜಾಧವ ಅರುಣ ಕೋರವಾರ, ಹುಸೇನ ಗೌಂಡಿ, ದಸ್ತಗೀರ ಬಗಲಿ, ಸೋಮಶೇಖರ ದೇವೂರ, ಎಮ್. ಎಚ್.ಪಟೇಲ ಇದ್ದರು.

