ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬಳ್ಳಾರಿ ಜಿಲ್ಲೆ ಶಿರಗುಪ್ಪ ನಗರದ ಸುಧಿಕ್ಷಾ ಇಂಟರ್ನ್ಯಾಷನಲ್ ಸ್ಕೂಲ್ ಪಿ ಯು ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಕೆಟಿಂಗ್ ಪಂದ್ಯಾವಳಿಯಲ್ಲಿ ಪಟ್ಟಣದ ಏಕಲವ್ಯ ರೂಲರ್ ಸ್ಕೆಟಿಂಗ್ ಅಕಾಡೆಮಿಯ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಭಾಗಿಯಾಗಿ ಬಂಗಾರ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದು ಸಾಧನೆ ಮಾಡುವ ಮೂಲಕ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಸುಧಿಕ್ಷಾ ಇಂಟರ್ನ್ಯಾಷನಲ್ ಸ್ಕೂಲ್ ಪಿ.ಯು ಕಾಲೇಜು, ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಹಾಗೂ ಕಲ್ಯಾಣ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ದೆಯಲ್ಲಿ, ರಾಜ್ಯದ ವಿವಿಧ ಜಿಲ್ಲೆಗಳ ೩೦೦ ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿ ಪ್ರತಿಭೆ ಪ್ರದರ್ಶಿಸಿದ್ದರು. ಈ ಪೈಕಿ ೫ ರಿಂದ ೬ ವರ್ಷದ ವಯೋಮಾನದ ೧೦೦ ಮೀಟರ್ ಕೆನಾಸಿಟಿ ಬಾಲಕಿಯರ ವಿಭಾಗದಲ್ಲಿ ಕಾವ್ಯಾ ಕಾಮನಕೇರಿ ಕಂಚಿನ ಪದಕ, ೬ ರಿಂದ ೮ ವರ್ಷದ ೧೦೦ ಮೀಟರ್ ಬಾಲಕರ ವಿಭಾಗದಲ್ಲಿ ಮಿತಿಲ್ ಅನ್ನಗೌನಿ ಬೆಳ್ಳಿ ಪದಕ, ೧೨ ರಿಂದ ೧೪ ವರ್ಷದ ೧೦೦ ಮೀಟರ್ ಬಾಲಕರ ವಿಭಾಗದಲ್ಲಿ ಹೃದಯಾನಂದ ಕೊಪ್ಪ ಬಂಗಾರ ಪದಕ, ಕರಣ ಬೂದಿಹಾಳಮಠ ಕಂಚಿನ ಪದಕ, ಟ್ಯೊಯಿನ್ ಲೈನ್ ೮ ರಿಂದ ೧೦ ವರ್ಷದ ೧೦೦ ಮೀಟರ್ ಬಾಲಕರ ವಿಭಾಗದಲ್ಲಿ ವಿಕ್ರಾಂತ ಶಾರದಳ್ಳಿ ಬಂಗಾರ ಪದಕ, ೬ ರಿಂದ ೮ ವರ್ಷದ ಬಾಲಕರ ವಿಭಾಗದಲ್ಲಿ ೨೦೦ ಮೀಟರನಲ್ಲಿ ಅನುಪ್ ತುಪ್ಪದ ಕಂಚಿನ ಪದಕ, ೮ ರಿಂದ ೧೦ ವರ್ಷದ ಬಾಲಕರ ವಿಭಾಗದಲ್ಲಿ ೧೦೦ ಮೀಟರನಲ್ಲಿ ನಾಗಶೃತನ ಇಲ್ಲೂರ ಕಂಚಿನ ಪದಕ, ೧೨ ರಿಂದ ೧೪ ವರ್ಷದ ಬಾಲಕರ ವಿಭಾಗದಲ್ಲಿ ೧೦೦ ಮೀಟರನಲ್ಲಿ ಶ್ರೇಯಸ್ ಭೋವಿ ಬಂಗಾರ ಪದಕ, ೧೨ ರಿಂದ ೧೪ ವರ್ಷದ ಬಾಲಕಿಯರ ವಿಭಾಗದಲ್ಲಿ ೧೦೦ ಹಾಗೂ ೨೦೦ಮೀಟರನಲ್ಲಿ ಮೀಟರನಲ್ಲಿ ಗಗನಸಿಂಧು ಅನ್ನಗೌನಿ & ರನ್ವಿತಾ ಅನ್ನಗೌನಿ ಕಂಚಿನ ಪದಕ, ೧೦ ರಿಂದ ೧೨ ವರ್ಷದ ಬಾಲಕಿಯರ ವಿಭಾಗದಲ್ಲಿ ೧೦೦ ಮೀಟರನಲ್ಲಿ ಆಮನಾ ಜಾನ್ವೇಕರ ಬಂಗಾರದ ಪದಕ, ೧೦ ರಿಂದ ೧೨ ವರ್ಷದ ಬಾಲಕಿಯರ ವಿಭಾಗದಲ್ಲಿ ಅದಿತಿ ನಾಗೂರ ೧೦೦ ಮೀಟರನಲ್ಲಿ ಬೆಳ್ಳಿ ಹಾಗೂ ೨೦೦ ಮೀಟರ್‌ನಲ್ಲಿ ಬಂಗಾರದ ಪದಕ, ೧೦ ರಿಂದ ೧೨ ವರ್ಷದ ಬಾಲಕಿಯರ ವಿಭಾಗದಲ್ಲಿ ೧೦೦ ಹಾಗೂ ೨೦೦ ಮೀಟರ್‌ನಲ್ಲಿ ಶಕುಂತಲಾ ಶಾರದಳ್ಳಿ ಕಂಚಿನ ಪದಕ, ೧೦ ರಿಂದ ೧೨ ವರ್ಷದ ಬಾಲಕಿಯರ ವಿಭಾಗದಲ್ಲಿ ೧೦೦ ಹಾಗೂ ೨೦೦ ಮೀಟರ ಎರಡು ಸ್ಕೆಟಿಂಗನಲ್ಲಿ ಕೃತಿಕಾ ತುಪ್ಪದ್ ಬೆಳ್ಳಿ ಪದಕ, ಬಾಲಕ-ಬಾಲಕಿಯರ ಜಂಟಿ ೧೦೦ ಮೀಟರ್‌ನಲ್ಲಿ ಆಮನಾ ಜಾನ್ವೇಕರ ಮತ್ತು ಹೃದಯಾನಂದ ಕೊಪ್ಪ ಬಂಗಾರ ಪದಕ ಪಡೆದು ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ತರಬೇತಿದಾರ ಶಿವಕುಮಾರ ಶಾರದಳ್ಳಿ ಅಭಿನಂದಿಸಿದ್ದಾರೆ.

