ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ನರ್ಸರಿ ಸಹಿತ ಒಂದರಿಂದ ಐದನೇ ತರಗತಿಯ ಮಕ್ಕಳು ವಿಜ್ಞಾನ, ಆಹಾರ, ಕೃಷಿ, ಪರಿಸರ ಮೇಳದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಪಟ್ಟಣದ ಇಂದುಮತಿ ಸಾವಳಗಿ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಸೋಮವಾರ ಜರುಗಿದ ಒಂದು ದಿನದ ಪ್ರದರ್ಶನ ಮೇಳದಲ್ಲಿ ೭೦ ಕ್ಕೂ ಹೆಚ್ಚು ಮಕ್ಕಳು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ನೀರಿನ ಶುದ್ಧಿಕರಣ, ಸೌರವ್ಯೂಹ ರಚನೆ, ಜ್ವಾಲಾಮುಖಿ ಚಿತ್ರ, ಪರಿಸರಕ್ಕೆ ಸಂಬಂಧಿಸಿದ ಮಾಲಿನ್ಯ ತಡೆಯುವ ಕ್ರಮಗಳು, ಜಿಲ್ಲೆಯ ಐತಿಹಾಸಿಕ ಗೋಳಗುಮ್ಮಟದ ಮಾದರಿ, ಆಹಾರ ಹಾಗೂ ಕೃಷಿಗೆ ಸಂಬAಧಿತ ಬೆಳೆಗಳು ಹಾಗೂ ಹಣ್ಣುಗಳ ವಿಧಗಳು, ಹೂ ಹಾಗೂ ಹಣ್ಣು ಬೆಳೆಯುವ ಹಂತಗಳು. ಅರಣ್ಯೀಕರಣ ಹಾಗೂ ಅದರ ಮಹತ್ವ ಸಾರುವ ವಿವಿಧ ಮಾಹಿತಿ, ಮಾಲಿನ್ಯ ತಡೆಯುವ ಕ್ರಮಗಳನ್ನು ಸಂಗ್ರಹಿಸಿ ಮಾಹಿತಿ ನೀಡಿದರು.
ತಾಯಂದಿರು ಹಾಗೂ ಶಿಕ್ಷಕಿಯರನ್ನು ನೋಡುತ್ತಾ ಭಯದಿಂದಲೇ ವಿವರಣೆ ನೀಡುವ ಮಕ್ಕಳ ಹಾವಭಾವ ಮತ್ತು ತೊದಲು ನುಡಿಗಳು ಎಲ್ಲರ ಗಮನ ಸೆಳೆದವು. ಬೆಳಿಗ್ಗೆ ಆರಂಭಗೊAಡ ಮಕ್ಕಳ ಒಂದು ದಿನದ ಪ್ರದರ್ಶನ ಮೇಳಕ್ಕೆ ಪಾಲಕರು ಹಾಗೂ ಸ್ಥಳೀಯ ಸಾರ್ವಜನಿಕರು ಭೇಟಿ ನೀಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಸಂಸ್ಥಾಪಕ ಅಧ್ಯಕ್ಷ ಶಾಂತಪ್ಪ ಸಾವಳಗಿ, ಕಾರ್ಯದರ್ಶಿ ಸಂತೋಷ ಸಾವಳಗಿ, ಸಾಹೇಬಗೌಡ ಬಿರಾದಾರ(ಡೋಣಿ ಬೂದಿಹಾಳ), ಕರಿಬಸಪ್ಪ, ಸಿಬ್ಬಂದಿ ಸುಜಾತಾ ಮಸಬಿನಾಳ, ಬೀಬಿ ಆಯೇಶಾ ಚಟ್ಟರಕಿ, ಪವಿತ್ರಾ ಹಳಿಮನಿ, ರಾಧಿಕಾ ಗುಡಿಮನಿ ಹಾಗೂ ಮಕ್ಕಳು ಇದ್ದರು.

