ಉದಯರಶ್ಮಿ ದಿನಪತ್ರಿಕೆ
ಇಂಡಿ: ಸಾಹಿತಿ ಹಾಗೂ ಶಿಕ್ಷಕಿ ಪಾರ್ವತಿ ಸೊನ್ನದ ರಚಿಸಿರುವ “ಹೆಮ್ಮೆಯ ಪುತ್ರ” ಮಕ್ಕಳ ಕಥಾ ಸಂಕಲನ ಕೃತಿ ರೇಣುಕ ಶಿವಾಚಾರ್ಯರರ ಅಮೃತ್ ಹಸ್ತದಿಂದ ಬಿಡುಗಡೆ ಗೊಳಿಸಲಾಯಿತು.
ಪಟ್ಟಣದ ಬಸವರಾಜೇಂದ್ರ ದೇವಸ್ಥಾನದ ಸಭಾ ಭವನದಲ್ಲಿ ಬಸವರಾಜೇಂದ್ರ ಸತ್ಸಂಗ ಸಮಿತಿ, ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ಅವರ ಸಹಯೋಗದಲ್ಲಿ ಜರಗುವ 89 ನೇ ಹುಣ್ಣುಮೆ ಬೆಳಕು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ “ಹೆಮ್ಮೆಯ ಪುತ್ರ” ಕೃತಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿರುವ ದ್ರಾಕ್ಷಾಯಣಿ ವ್ಹಿ ಮೈದರಗಿ, ಅತಿಥಿ ಉಪನ್ಯಾಸಕ ಯಶವಂತ್ ಡಿ ಎಸ್, ಸುಜಾತ ರಾಮಕೃಷ್ಣನ್, ದತ್ತಿ ದಾನಿ ಬಾಲಾಜಿ ನರಸಯ್ಯ ಇಪ್ಪಕಾಯಿಲ್, ನಿವೃತ್ ಪ್ರಾಚಾರ್ಯ ಐ ಬಿ ಸುರಪೂರ, ಮುಖ್ಯ ಅತಿಥಿ, ಸಾಹಿತಿ ಪಾರ್ವತಿ ಸೊನ್ನದ, ಶರಣ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಆರ್ ವಿ ಪಾಟೀಲ ಹಾಗೂ ಇನ್ನೂ ಮುಖಂಡರು ಉಪಸ್ಥಿತರಿದ್ದರು.

