ಉದಯರಶ್ಮಿ ದಿನಪತ್ರಿಕೆ
ಢವಳಗಿ: ಮಹಾರಾಷ್ಟ್ರ ರಾಜ್ಯದ ಅಹಮದಾಬಾದ್ ನಗರದಲ್ಲಿ ಡಿಸೆಂಬರ್ 13 ರಿಂದ 15ರ ವರೆಗೆ ನಡೆದ 2024-25 ನೇ ಸಾಲಿನ ಅಂತರರಾಜ್ಯ ಮಟ್ಟದ ಅಂಗವಿಕಲರ ಕ್ರಿಕೆಟ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದ ತಂಡದ ನಾಯಕರಾಗಿ ಬಾಗೇವಾಡಿ ತಾಲ್ಲೂಕಿನ ಅಂಬಳನೂರ ಗ್ರಾಮದ ಮಾಂತೇಶ ಚಲವಾದಿ ಅವರ ನೇತೃತ್ವ ದಲ್ಲಿ ದ್ವೀತಿಯ ಸ್ಥಾನ ಪಡೆದಿದೆ.
ತಂಡದ ಆಟಗಾರರಾಗಿ ಮಹೇಶಕುಮಾರ ಅಗಳಿ, ರಾಜೇಶ ಚಲವಾದಿ, ವಿಷ್ಣು ರಾಠೋಡ, ಯಮನಪ್ಪ ಚಲವಾದಿ, ಪಂಪಾಪತಿ, ಯಂಕಣ್ಣ, ಮಾಂತೇಶ ವಜ್ಜಲ, ಸಂಜು ಪವಾರ್, ಸಂಜು ರಜಪೂತ, ಮುತ್ತು ಕೋಲಕಾರ, ವಿಜಿತಕುಮಾರ, ರಾಜೇಶ ಲಮಾಣಿ.ಇದ್ದರು.ನಾಯಕ ಮಾಂತೇಶ ಚಲವಾದಿ ಅವರಿಗೆ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿಯ ವಿಡಿಸಿಸಿ ಬ್ಯಾಂಕ್ ನ ವ್ಯವಸ್ಥಾಪಕರು, ಸಿಬ್ಬಂದಿಗಳು ಸೇರಿದಂತೆ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದರು.

