Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು :ಸಂಗಮೇಶ
(ರಾಜ್ಯ ) ಜಿಲ್ಲೆ

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು :ಸಂಗಮೇಶ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಬಸವನಬಾಗೇವಾಡಿ: ವಿದ್ಯಾರ್ಥಿಗಳು ಶ್ರದ್ಧೆ, ನಂಬಿಕೆ, ಆತ್ಮವಿಶ್ವಾಸ ಇಟ್ಟುಕೊಳ್ಳುವ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡರೆ ವಿಜ್ಞಾನ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಳೇವಾಡ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಸಂಗಮೇಶ ಪೂಜಾರಿ ಹೇಳಿದರು.
ಪಟ್ಟಣದ ಬಿಎಲ್ಡಿಇ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನ ಎಂದರೆ ಶಿಸ್ತು. ಇಂದು ವಿಜ್ಞಾನವೇ ಯುಗಧರ್ಮವಾಗಿದೆ. ವಿಜ್ಞಾನದಲ್ಲಿಯಾಗಿರುವ ಅನೇಕ ಸಂಶೋಧನೆಗಳಿಂದ ಜಗತ್ತು ಅಭಿವೃದ್ಧಿಯತ್ತ ಸಾಗುತ್ತಿದೆ. ವಿಜ್ಞಾನಧರ್ಮವನ್ನು ಇಟ್ಟುಕೊಂಡು ಧರ್ಮವನ್ನು ನೋಡಬೇಕು. ನಂಬಿಕೆ, ಶ್ರದ್ಧೆ ಇಟ್ಟುಕೊಂಡು ಇಡೀ ಸಮುದಾಯ ಬದುಕುತ್ತದೆ. ಜಗತ್ತಿನ ಅಭಿವೃದ್ಧಿಗೆ ವಿಜ್ಞಾನ ಪೂರಕವಾಗಿದೆ. ಧರ್ಮದಲ್ಲಿ ವಿಜ್ಞಾನ ಹೆಚ್ಚು ತರುವಂತಾಗಬಾರದು. ಅಕ್ಷರ ಕಲಿತವರು ರಾಕ್ಷಸರಾಗಬೇಕಾಗುತ್ತದೆ. ಮೌಲ್ಯಯುತವಾಗಲು ಸಾಧ್ಯವಾಗುವುದಿಲ್ಲ . ಪ್ರತಿಯೊಬ್ಬರೂ ಸಮಸ್ಯೆ ನಮ್ಮವು ಅಂದಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆಧುನಿಕತೆಯಲ್ಲಿ ಸಮಯ, ಹಣ, ಶ್ರಮ ಕಡಿಮೆಯಾಗುವಂತೆ ಮಾಡುವ ಕಡೆಗೆ ಹೆಚ್ಚು ಯುವಜನಾಂಗ ಗಮನ ಹರಿಸಬೇಕು. ನಮ್ಮ ದೇಶವು ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿದಿದೆ. ಕೋವಿಡ್ ಲಸಿಕೆಯನ್ನು ಅನೇಕ ದೇಶಗಳಿಗೆ ಕಳುಹಿಸಿಕೊಟ್ಟಿದ್ದು ನಮ್ಮ ವೈಜ್ಞಾನಿಕ ಸಾಧನೆಯ ಮೈಲುಗಲ್ಲುಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳು ದೇಶಕ್ಕೆ ಕೊಡುಗೆ ನೀಡುವಂತಾಗಬೇಕೆಂದರು.
ಪಿಎಸ್ಐ ಆರ್.ಐ.ದುಂಡಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮೈಗೂಡಿಸಿಕೊಂಡರೆ ತಾವು ಅಂದುಕೊಂಡ ಗುರಿ ತಲುಪಲು ಸಾಧ್ಯ. ಇಂದು ವಿದ್ಯಾರ್ಥಿಗಳಲ್ಲಿ ಹೆಚ್ಚು ಅಶಿಸ್ತು ಕಂಡುಬರುತ್ತಿದೆ. ವಿದ್ಯಾರ್ಥಿಗಳು ಯಾವುದೇ ಕೆಟ್ಟ ಚಟಗಳಿಗೆ ದಾಸರಾಗದೇ ಉತ್ತಮ ಅಧ್ಯಯನ ಮಾಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಉತ್ತಮ ಅಧ್ಯಯನ ಮಾಡದೇ ಹೋದರೆ ಮುಂದೆ ಪಶ್ಚಾತ್ತಾಪ ಪಡುವಂತಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ರಾಮಚಂದ್ರ ಪವಾರ ವಹಿಸಿದ್ದರು. ವೇದಿಕೆಯಲ್ಲಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ, ನಿವೃತ್ತ ಮುಖ್ಯಗುರು ಎಸ್.ಕೆ.ಚಿಕರಡ್ಡಿ, ಸೈನಿಕ ಶಾಲೆಯ ಪ್ರೊ.ಎಂ.ಎಂ.ಕಿನಾಳ ಇದ್ದರು. ಎಂ.ಕೆ.ಯಾದವ ಸ್ವಾಗತಿಸಿದರು. ಅರ್ಚನಾ ದಂಡಾವತಿ ನಿರೂಪಿಸಿದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ೨೫ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ತಳೇವಾಡದ ಎಸ್ಬಿಎನ್ಎನ್ಜಿಎಚ್ಎಸ್ ಶಾಲೆಯ ಸುನೀಲ ಚವ್ಹಾಣ ಅವರ ತಂಡ (ಪ್ರಥಮ), ಬಸವನಬಾಗೇವಾಡಿಯ ಬಸವೇಶ್ವರ ಸರ್ಕಾರಿ ಪ್ರೌಢಶಾಲೆಯ ಸ್ವಾತಿ ನಾಯ್ಕರ್ ಅವರ ತಂಡ(ದ್ವಿತೀಯ), ಮಸಬಿನಾಳದ ಎನ್ಇಎಚ್ಎಸ್ ಪ್ರೌಢಶಾಲೆಯ ಸ್ನೇಹಾ ಲಮಾಣಿ (ತೃತೀಯ) ಬಹುಮಾನ ಪಡೆದುಕೊಂಡರು. ಸಮಾಧಾನಕರ ಬಹುಮಾನವನ್ನು ಬಸವನಬಾಗೇವಾಡಿಯ ಜಿಜಿಎಚ್ಎಸ್ ಶಾಲೆಯ ಸುಕನ್ಯಾ ಮುಟೇಕರ, ತಳೇವಾಡದ ಎಸ್ಬಿಎನ್ಎನ್ಜಿಎಚ್ಎಸ್ ಶಾಲೆಯ ಶ್ರೀಶೈಲ ಮರಣೂರ, ಬಸವನಬಾಗೇವಾಡಿಯ ಬಿಇಎಂಎಸ್ ಶಾಲೆಯ ಸಮರ್ಥ, ರಿತೀಷಾ ನಾಗೋಡ ಪಡೆದುಕೊಂಡರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮಃ ಬೆಳಗ್ಗೆ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಗೊಳಸಂಗಿ ಆರ್.ಎ.ಡಿ.ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಎಸ್.ಕೆ.ಚಿಕರಡ್ಡಿ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ವಿಷಯ ಗ್ರಾಮೀಣ ಪ್ರದೇಶವಾಗಿರಲಿ, ಯಾವುದೇ ಪ್ರದೇಶವಾಗಿರಲಿ ಎಲ್ಲರಿಗೂ ಒಂದೇಯಾಗಿದೆ. ಇದನ್ನು ಆಸಕ್ತಿಯಿಂದ ಅಧ್ಯಯನ ಮಾಡುವಂತಾಗಬೇಕು. ವಿದ್ಯಾರ್ಥಿಗಳು ಸಂಶೋಧನಾತ್ಮಕ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ವಿಜಯಪುರ ಸೈನಿಕ ಶಾಲೆಯ ಭೌತಶಾಸ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಂ.ಕಿನಾಳ ಮಾತನಾಡಿದರು. ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ರಾಮಚಂದ್ರ ಪವಾರ ಪ್ರಾಸ್ತವಿಕವಾಗಿ ಮಾತನಾಡಿದರು. ಎಂ.ಕೆ.ಯಾದವ ಸ್ವಾಗತಿಸಿದರು. ಅರ್ಚನಾ ದಂಡಾವತಿ ನಿರೂಪಿಸಿದರು. ಲಕ್ಷ್ಮಣ ಬ್ಯಾಡಗಿ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026
    In ದಿನಪತ್ರಿಕೆ
  • ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ
    In (ರಾಜ್ಯ ) ಜಿಲ್ಲೆ
  • ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಕಲಾಶ್ರೀ ಚವ್ಹಾಣ ಗೆ ಅಭಿನಂದಿಸಿದ ಡಾ.ಸುರೇಖಾ
    In (ರಾಜ್ಯ ) ಜಿಲ್ಲೆ
  • ಸಚಿವ ಎಂ. ಬಿ. ಪಾಟೀಲ ಅವರ ಪ್ರವಾಸ ವಿವರ
    In (ರಾಜ್ಯ ) ಜಿಲ್ಲೆ
  • ನ್ಯಾಯ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿಖರ ತನಿಖೆ & ದೃಢ ಸಾಕ್ಷಿ
    In (ರಾಜ್ಯ ) ಜಿಲ್ಲೆ
  • ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದಪೊಲೀಸ್ ಅಧಿಕಾರಿಗಳು
    In (ರಾಜ್ಯ ) ಜಿಲ್ಲೆ
  • ಯಡ್ರಾಮಿ ಬಸವೇಶ್ವರ ಜಾತ್ರೆಯ ಅದ್ದೂರಿ ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾ ಪ್ರಕ್ರಿಯೆಯ ಪ್ರತಿ ಹಂತ ವೀಕ್ಷಿಸಿದ ಜಿ.ಪಂ. ಸಿಇಒ ರಿಷಿ ಆನಂದ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.