ಲೇಖನ:- ಕೆ.ಕೆ.ಕುಲಕರ್ಣಿವಿಜಯಪುರ
ಉದಯರಶ್ಮಿ ದಿನಪತ್ರಿಕೆ
ವಿದ್ವದ್ವರೈರ್ಮಣಿಪುರ ಸ್ಥಿತ ಭೂಸುರೇಂದ್ರೆö ||
ಸಂಪ್ರಾರ್ಥ್ಯಮಾನ ಮನಿಶಂ ಶುಭ ಕೇಶವೇಶಮ್ ||
೧೪ ನೇ ಶತಮಾನದ ಮಧ್ಯ ಭಾಗದಲ್ಲಿ ಆದ್ಯ ಮನೆತನದ ಹಿರಿಯರಾದ ಶೇಷಾದ್ರಿಗಳು ಪವಿತ್ರ ಕ್ಷೇತ್ರ ಕಂಚಿ-ಕುಂಬ ಕೋಣಗಳಿಂದ ವಲಸೆ ಬಂದು ವೃತ್ತಾಂತದಲ್ಲಿ ಬರುವ ಮಣಿಯೂರು, ಮಣಿಪುರ ಈಗಿನ ಅಫಜಲಪುರ ತಾಲೂಕಿನ ಹಿರೇಮಣೂರ ಗ್ರಾಮಕ್ಕೆ (ಕ್ರಿ.ಶ.೧೩೭೬ರಲ್ಲಿ) ಬಂದು, ಇಲ್ಲಿಯ ದ್ವೈತ ವೇದಾಂತ ಸ್ಥಾಪನಾಚಾರ್ಯರಾದ ಆನಂದತೀರ್ಥರ ಶಿಷ್ಯರಲ್ಲೊಬ್ಬರಾದ ಶ್ರೀ ಮಾಧವತೀರ್ಥರು ತಪಗೈದು ವೃಂದಾವನಸ್ಥರಾದ ತಾಣ. ಇದು ಬಹು ದೊಡ್ಡ ವಿದ್ಯಾಕೇಂದ್ರವು ಆಗಿತ್ತು.
ಶೇಷಾದ್ರಿಗಳ ಸ್ವಪ್ನದಲ್ಲಿ ಕಾಣಿಸಿಕೊಂಡು ಮಣ್ಣೂರಿನಲ್ಲಿ ಅವರಿಂದ ಪ್ರತಿಷ್ಠಾಪಿತವಾದ ಚೆನ್ನಕೇಶವ ಮೂರ್ತಿಯೂ ದೃವಕರಾರ್ಚಿತ ಮೂರ್ತಿಯೆಂದು ಅತಿಹ್ಯವಿರುವುದು. ಶಂಖ ಚಕ್ರ ಗಧಾ ಪದ್ಮ ಧರಿಸಿದ, ಕೀರಿಟ ಕರ್ಣ ಕುಂಡಲಗಳಿಂದ ಸುಶೋಭಿತ, ಚತುರ್ಭುಜದ ದಿವ್ಯ ವಿಷ್ಣುವಿನ ೨೪ ರೂಪಗಳಲ್ಲಿ ಕೇಶವ ಎಂಬ ರೂಪವು ಪ್ರಥಮ ಸ್ಥಾನವಾಗಿದೆ. ಈ ಕೇಶವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹೋತ್ಸವ ಆಚರಿಸುತ್ತಾ ಬರಲಾಗುತಿದ್ದು, ಶ್ರೀ ಕೇಶವನು ಶೇಷಾದ್ರಿಗಳಿಗೆ ಅವರ ವಂಶಕರಿಗೆ ಆರಾಧ್ಯ ದೇವರು. ಮಣ್ಣೂರು ಪುರಾಣ ಪ್ರಸಿದ್ದವು ಜಾಗೃತ ಸ್ಥಾನವು ಆಗಿತ್ತೆಂಬುದರಲ್ಲಿ ಸಂಶಯವಿಲ್ಲ. ಆಧ್ಯತ್ವವನ್ನು ಸಂಪಾದಿಸಿದ ವರದ ರಾಜಾಚಾರ್ಯರ ಭವಿಷ್ಯವನ್ನು ತಪೋನಿಧಿಗಳು ಅಪರೋಕ್ಷ ಜ್ಞಾನಿಗಳು ಆದ ಉತ್ತರಾಧಿಮಠದ ವಿಧ್ಯಾನಿಧಿತೀರ್ಥರು ಪೂರ್ಣ ಅರಿತಿದ್ದರು. ವರದರಾಜರು ಅಪೂರ್ವ ವಿಧ್ಯಾ ಶಾಲಿಯಾಗಿ ವ್ಯಾಸರಾಜರ ಗ್ರಂಥ ವಿಶ್ಲೇಷಣೆ ಮಾಡಿ ಶ್ರೀ ರಘುನಾಥತೀರ್ಥರ ಸಮ್ಮುಖದಲ್ಲಿ ಟೀಕಾಕೃತ್ಪಾದರು ಶ್ರೀಮದಾಚಾರ್ಯರರ ತತ್ವ ಗ್ರಂಥಗಳಿಗೆ ಏಕೈಕ ಟೀಕಾಕಾರರು ಮಾರ್ಗದರ್ಶಕರು ಎಂದು ಸಿದ್ದಮಾಡಿ “ ಆದ್ಯರು” ಎಂಬ ಬಿರುದನ್ನು ಸಂಪಾದಿಸಿದರು. ಇದು ಆಧ್ಯ ಮನೆತನದ ಇತಿಹಾಸದಲ್ಲಿ ಮಹತ್ವ ಪೂರ್ಣ ಘಟನೆ.
ಶೇಷಾಚಾರ್ಯರ ಮಕ್ಕಳಾದ ಮುಮ್ಮಡಿ ವರದರಾಜರು, ಕೃಷ್ಣದ್ವೆöÊಪಾಯನರು ಅಲೌಕಿಕ ಯಶಸ್ಸನ್ನು ಸಂಪಾದಿಸಿದ್ದಾರೆ ಕೃಷ್ಣದ್ವೆöÊಪಾಯನರು ಅಂದಿನ ಕಾಲದ ಅಪರೋಕ್ಷಜ್ಞಾನಿಗಳಲ್ಲಿ ಒಬ್ಬರೆಂದು ಪೂಜಿತರಾಗಿದ್ದಾರೆ. ಆದ್ಯವಂಶಜರು ವರ್ಣನೆ ವಿವರಣೆ ಹೇಳುತ್ತ ಹೋದರೆ ಸಾಲು ಪುಟಗಳನ್ನೇ ಬರೆಯಬೇಕಾದೀತು. ಆದರೂ ಆರು ಶಾಖೆಗಳಾಗಿ ಅಗರಖೇಡ, ಭೂಯ್ಯಾರ, ಬಳ್ಳೋಳ್ಳಿ, ಚಿಕ್ಕಮಣ್ಣೂರ, ಪಡಗಾನೂರ ಮೊದಲಾದ ಗ್ರಾಮಗಳಲ್ಲಿ ಅವರ ಮನೆತನವು ಹರಡಿದೆ. ಅದು ಇಂದು ದೊಡ್ಡ ವಟವೃಕ್ಷವಾಗಿ ಬೆಳೆದು ನಿಂತಿದೆ. ಆದ್ಯ ರಂಗಾಚಾರ್ಯ, ರಾಘವಾಚಾರ್ಯ, ರಘುನಾಥ ಜಹಾಗಿರದಾರ, ವರದರಾಜ ಆದ್ಯ, ಆದ್ಯ ಸೇತುರಾಮಾಚಾರ್ಯ, ಶ್ರೀರಂಗ ಎಂದೇ ಖ್ಯಾತಿಯಾದ ಆದ್ಯ ರಂಗಾಚಾರ್ಯ, ಬಿಂದಾಚಾರ್ಯ ಜಹಗೀರದಾರ, ವೆಂಕಟೇಶಾಚಾರ್ಯ ಜಹಾಗೀರದಾರ, ಪಡಗಾನೂರಿನ ದ್ವೆöÊಪಾಯನಚಾರ್ಯ ಸೇರಿದಂತೆ ಅನೇಕರು ಇಂದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆದ್ಯ ವಂಶಜರ ಹೆಸರನ್ನು ಉತ್ತುಂಗಕ್ಕೆ ಒಯ್ಯುವಂತೆ ಮಾಡಿ ಹೋಗಿದ್ದಾರೆ.
ಆದ್ಯರ ಕುಲದೇವ ಶ್ರೀ ಚೆನ್ನಕೇಶವ ಮಾರ್ಗಶೀರ್ಷ ಶುದ್ದ ಪೂರ್ಣಿಮೆ ದಿನ ಶೇಷಾದ್ರಿಗಳ ಸ್ವಪ್ನದಿಂದ ದೊರೆತನಾದುದರಿಂದ ಅಂದು ಕೇಶವ ಜಯಂತಿಯನ್ನು ಆಚರಿಸುವದು ರೂಢಿಯಲ್ಲಿ ಬಂದಿದೆ ಎಂದು ಹೇಳಲಾಗುತ್ತಿದೆ. ಅಂದು ಉಷಃಕಾಲದಲ್ಲಿ ಶ್ರೀ ಭೀಮರಥ್ಯ ತೀರ್ಥದಲ್ಲಿ ಮಿಂದು ಪೂರ್ಣ ಕುಂಭೊದಕವನ್ನು ತರಲಾಗುತ್ತದೆ. ದಾರಿಯೂದ್ದಕ್ಕೂ ಶ್ರೀ ವೇದೇಶತೀರ್ಥರು ರಚಿಸಿದ ಕರಾವಲಂಭನ ಸ್ತೋತ್ರಗಳನ್ನು ಹೇಳುತ್ತಾ ಬರುವ ಸಂಪ್ರದಾಯವಿದೆ ಎನ್ನಲಾಗುತ್ತಿದೆ.
ಅದೇ ತೆರನಾಗಿ ಇಂದಿಗೂ ಕೂಡಾ ಆದ್ಯ ವಂಶಜರು ಶ್ರೀ ಚೆನ್ನಕೇಶವ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತ ಬರುತ್ತಿದ್ದಾರೆ.
ಹಿರೇಮಣ್ಣೂರಿನಲ್ಲಿ ಡಿ.೧೫-೧೬ ರಂದು ಚನ್ನಕೇಶವ ಜಯಂತಿ
ಶ್ರೀ ಕ್ಷೇತ್ರ ಮಣ್ಣೂರಿನಲ್ಲಿ ಡಿ.೧೫ ಮತ್ತು ೧೬ರಂದು ಚನ್ನಕೇಶವ ಜಯಂತಿ ಜರುಗಲಿದೆ
೧೫ರಂದು ಮಾರ್ಗಶೀರ್ಷ ಪೌರ್ಣಮಿ ಬೆಳಗ್ಗೆ ಸುಪ್ರಭಾತ ಚನ್ನಕೇಶವ ದೇವರ ಸಹಸ್ರ ಶಂಖಾ ಭಿಷೇಕ, ಪಂಚಾಮೃತ ಅಭಿಷೇಕ, ರಂಗಪೂಜೆ, ರಥೋತ್ಸವ, ಲಕ್ಷ ಪುಷ್ಪಾರ್ಚನೆ, ಮಹಾ ನೈವೇದ್ಯ, ತೀರ್ಥ ಪ್ರಸಾದ ಸಂಜೆ ೭ ಗಂಟೆಗೆ ದಾಸವಾಣಿ ಕಾರ್ಯಕ್ರಮ ಜರುಗುವುದು.
ಡಿ.೧೬ರಂದು ಬೆಳಗ್ಗೆ ಸುಪ್ರಭಾತ ಚನ್ನಕೇಶವ ದೇವರಿಗೆ ಪಂಚಾಮೃತ ಅಭಿಷೇಕ, ರಘುನಾಥತೀರ್ಥ ಆದ್ಯ ವರದರಾಜಾಚಾ ರ್ಯರ ಕೃಷ್ಣ ದೈಪಾಯನಾಚಾರ್ಯ ಹಾಗೂ ರಾಮಕೇಶವಾ ಚಾರ್ಯರ ಪಾದುಕೆಗಳ ಶೋಭಾಯಾತ್ರೆ ಭೀಮಾನದಿಯಿಂದ ಚನ್ನಕೇಶವ ದೇವಸ್ಥಾನದವರೆಗೆ ಜರುಗುವುದು. ನಂತರ ರಥೋತ್ಸವ, ಮಹಾ ನೈವೇದ್ಯ, ಅಲಂಕಾರ, ತೀರ್ಥ ಪ್ರಸಾದ ಸಂಜೆ ಮಹಾಮಂಗಳಾರತಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಶ್ರೀ ಚನ್ನಕೇಶವ ಟ್ರಸ್ಟ್ ಕಮಿಟಿಯವರು ತಿಳಿಸಿದ್ದಾರೆ.