ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುಳವಾಡ ಸಮೀಪದಲ್ಲಿ ಟೋಲ್‌ನ್ನು ಏಕಾಏಕಿ ಪ್ರಾರಂಭಿಸಿ ಟೋಲ್ ಸಂಗ್ರಹಣೆ ಮಾಡುತ್ತಿದ್ದು, ರೈಲ್ವೆ ಹಳಿಯ ಮೇಲೆ ನಿರ್ಮಿಸುತ್ತಿರುವ ಸೇತುವೆ ಸಂಪೂರ್ಣ ಮಾಡದೇ ಹಾಗೂ ಅಲ್ಲಿ ಇರಬೇಕಾದ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಅಂಬೂಲೇನ್ಸ್, ಕ್ರೇನ್, ಶೌಚಾಲಯ, ಸೇರಿದಂತೆ ಅನಿವಾರ್ಯ ಕಾರಣಗಳಿಂದ ನಿಂತಿರುವ ವಾಹನಗಳಿಗೆ ಪೆಟ್ರೋಲ್ ಅಥವಾ ಡಿಸೇಲ್ ವ್ಯವಸ್ಥೆ, ತುರ್ತು ಪಂಚರ್ ತಿದ್ದುವ ವ್ಯವಸ್ಥೆ, ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಹೊಂದಿದ ನಂತರವೇ ಟೊಲ್ ಸಂಗ್ರಹ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಿದರು.
ಒಂದು ತಿಂಗಳ ಸಮಯಾವಕಾಶದಲ್ಲಿ ಕಾಮಗಾರಿ ಮುಗಿಸಬೇಕು ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧ್ಯಕ್ಷ ಸಂಗಮೇಶಗ ಸಗರ ಮನವಿ ಸಲ್ಲಿಸಿ ಮಾತನಾಡಿ, ರೈಲ್ವೇ ಸೇತುವೆ ನಿರ್ಮಿಸದೇ ಟೊಲ್ ಸಂಗ್ರಹಿಸುತ್ತಿದ್ದಾರೆ, ಇದು ಕಾನೂನು ಬಾಹೀರ ಹಾಗೂ ನ್ಯಾಶನಲ್ ಹೈವೇಯವರೇ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ ಎಲ್ಲಾ ವ್ಯವಸ್ಥೆಗಳು ಕಲ್ಪಿಸಿದ ನಂತರವೇ ಟೊಲ್ ಸಂಗ್ರಹ ಮಾಡಬೇಕು ಎಂದು ಈ ಮೂಲಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಗ್ರಹಿಸುತ್ತಿದ್ದೆವೆ ಎಂದರು.
ಕೋಲಾರ ಅಧ್ಯಕ್ಷ ಸೋಮು ಬಿರಾದಾರ ಮಾತನಾಡುತ್ತಾ, ಟೋಲ್ ಪ್ಲಾಜಾದಿಂದ ಸುತ್ತಮುತ್ತಲಿನ ಮುಳವಾಡ, ಮಲಘಾಣ, ಕಲಬುರಕಿ, ರೋಣಿಹಾಳ, ಕುಬಕಡ್ಡಿ, ದುಡ್ಯಾಳ, ಕಾರಜೋಳ, ತೋನಶ್ಯಾಳ, ಹೊನಗನಹಳ್ಳಿ, ಚಿಕ್ಕಆಸಂಗಿ, ಹಿರೇಆಸಂಗಿ, ಕೋಲ್ಹಾರ ಸೇರಿದಂತೆ ಎಲ್ಲಾ ವಾಹನ ಸವಾರರಿಗೆ ಉಚಿತವಾಗಿ ಹಾಗೂ ಶಾಶ್ವತವಾಗಿ ಪ್ರಯಾಣ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ ಮಾತನಾಡಿದರು.
ಈ ವೇಳೆ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಹೈವೆ ಅಧಿಕಾರಿಗಳಿಗೆ ಶೀಘ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಮಾಡಬೇಕು, ಒಂದು ತಿಂಗಳ ಕಾಲಾವಕಾಶದೊಳಗೆ ರೈಲ್ವೇ ಬ್ರೀಡ್ಜ್ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು, ಎಂದರು.
ಈ ವೇಳೆ ಡಿ.ವಾಯ್,ಎಸ್.ಪಿ ಶಂಕರ ಮಾರಿಹಾಳ, ನ್ಯಾಶನಲ್ ಹಾಯವೈ ಅಧಿಕಾರಿಗಳಾದ ಮಠ, ವಿಜಯಪುರ ತಾಲೂಕಾ ಅಧ್ಯಕ್ಷರಾದ ಮಹಾದೇವಪ್ಪ ತೇಲಿ, ಉಪಾಧ್ಯಕ್ಷರಾದ ಪ್ರಕಾಶ ತೇಲಿ, ರೋಣಿಹಾಳ ಅಧ್ಯಕ್ಷರಾದ ಬಸ್ಸು ನ್ಯಾಮಗೌಂಡ, ಚಡಚಣ ಪ್ರಧಾನ ಕಾರ್ಯದಶೀಘಳಾದ ಸೋಮು ಪಟ್ಟಣಶೆಟ್ಟಿ, ಸೇರಿದಂತೆ ಅನೇಕರು ಇದ್ದರು.

