ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆವ್ಹಾನ ನೀಡಿದ ಆಲಮೇಲ ತಾಲೂಕು ಕಸಾಪ ಘಟಕ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಆಲಮೇಲ ತಾಲ್ಲೂಕು ೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಸಾಹಿತಿ, ಕಲಾವಿದ ಚನ್ನವೀರಶಾಸ್ತ್ರೀ ಅವರನ್ನು ಆಯ್ಕೆ ಮಾಡಿದ್ದು ಅತ್ಯಂತ ಸೂಕ್ತವಾದುದು ಎಂದು ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಚಂದ್ರಶೇಖರ ವಸ್ತ್ರದ ಹೇಳಿದರು.
ಆಲಮೇಲ ತಾಲ್ಲೂಕು ಕಸಾಪ ಘಟಕವು ಗದಗ ನಗರದ ಚನ್ನವೀರಶಾಸ್ತ್ರೀ ಹಿರೇಮಠ ಅವರ ಮನೆಯಲ್ಲಿ ಅಧಿಕೃತ ಆವ್ಹಾನ ನೀಡಿದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನಿಕಟಪೂರ್ವ ಅಧ್ಯಕ್ಷ ಡಾ.ರಮೇಶ ಕತ್ತಿ ‘ಆಲಮೇಲ ಕಸಾಪ ಪರವಾಗಿ ಅಭಿನಂದಿಸಿ ಸಮ್ಮೇಳನಕ್ಕೆ ಆವ್ಹಾನಿಸಿ ಪರಿಷತ್ತಿನ ಪರವಾಗಿ ಆಮಂತ್ರಣ ನೀಡಿದರು.
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ ” ಕಡಣಿ ಶಾಸ್ತ್ರೀಗಳು ಕಲೆ, ಸಾಹಿತ್ಯ ಸಂಸ್ಕೃತಿಯಲ್ಲಿ ನಾಲ್ಕು ದಶಕಗಳಿಂದಲೂ ಗಮನಾರ್ಹ ಸೇವೆ ಮಾಡಿದ್ದಾರೆ, ಅವರ ಸೇವೆಗೆ ಸಂದ ಗೌರವ ಇದು, ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿರುವುದು ಪರಿಷತ್ತಿನ ಪದಾಧಿಕಾರಿಗಳು ಉತ್ತಮ ನಿರ್ಧಾರ ಮಾಡಿದ್ದಾರೆ ಎಂದರು.
ವಿಭೂತಿ ಪತ್ರಿಕೆ ಸಂಪಾದಕ ಅಂದಾನಪ್ಪ ವಿಭೂತಿ , ಫಕೀರೇಶ್ವರಶಾಸ್ತ್ರಿ ಹಿರೇಮಠ ಬೆಳ್ಳಟ್ಟಿ, ನಿವೃತ್ತ ಪ್ರಾಚಾರ್ಯ ಡಾ. ಜಿ.ಬಿ.ಪಾಟೀಲ,
ಪ್ರೊ. ಡಾ.ಅನ್ಮದಾನಿ ಹಿರೇಮಠ, ಸುರೇಶ ಕುಂಬಾರ, ಜಿಲ್ಲಾ ಕಸಾಪ ಕಾರ್ಯದರ್ಶಿ ಕಿಶೋರ ಬಾಬು ನಾಗರಕಟ್ಟಿ ಮತ್ತು ಗದಗ ಬೆಟಗೇರಿ ನಗರ ಸಭೆ ಮಾಜಿ ಅಧ್ಯಕ್ಷೆ ಶಿವಲೀಲಾ ಅಕ್ಕಿ ಮೊದಲಾದವರು ಉಪಸ್ಥಿತರಿದ್ದರು.

