ಆಲಮೇಲ ತಾಲ್ಲೂಕು ೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮದ ಲೇಖಕ, ಕವಿ, ಪ್ರವಚನಕಾರ, ಸಂಘಟಕ, ಸಾಂಸ್ಕೃತಿಕ, ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಚನ್ನವೀರಶಾಸ್ತ್ರೀ ಹಿರೇಮಠ ಅವರು ಆಲಮೇಲ ತಾಲ್ಲೂಕು ೨ನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಾವ್ಯ, ಅಧ್ಯಾತ್ಮಿಕ ಗೀತೆ, ನಾಟಕ, ಸಂಪಾದನೆ, ಲೇಖನಗಳ ಸಂಕಲನ ಸೇರಿದಂತೆ ಹತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ, ಕಲಾವಿಕಾಸ ಪರಿಷತ್ತಿನ ಅಧ್ಯಕ್ಷರಾಗಿ , ಶಾಸ್ತ್ರೀಯ ಸಂಗೀತದ ಶಿಕ್ಷಕರಾಗಿಯೂ ತರಬೇತಿಯನ್ನು ಕೊಡುತ್ತಾ ಬಂದಿದ್ದಾರೆ, ಸಂಗೀತ ಶಿಕ್ಷಕರ ನೇಮಕಾತಿಗಾಗಿ ನಾಡಿನಾದ್ಯಂತ ಹೋರಾಟಮಾಡಿ ಯಶಸ್ವಿಯಾಗಿದ್ದಾರೆ,
ಚನ್ನವೀರಶಾಸ್ತ್ರೀ ಹಿರೇಮಠ ಅವರು ಮೂಲತಃ ಕಡಣಿ ಗ್ರಾಮದವರು ಈಗ ಗದುಗಿನಲ್ಲಿ ವಾಸವಾಗಿದ್ದು, ಸಂಘಟನೆ. ಸಾಹಿತ್ಯ, ಸಂಸ್ಕೃತಿಯ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಲವು ಸಮ್ಮೇಳನಗಳಲ್ಲಿ ಭಾಗವಹಿಸಿ ಕವಿತಾ ವಾಚನ ಮಾಡಿದ್ದಾರೆ. ರಾಜ್ಯಮಟ್ಟದ ಸಂಘಸಂಸ್ಥೆಗಳನ್ನು ಸ್ಥಾಪಿಸಿ ನಾಡಿನ ತುಂಬ ಕಡಣಿ ಹೆಸರನ್ನು ತಮ್ಮ ಹೆಸರಿನೊಂದಿಗೆ ಪಸರಿಸಿದ್ದಾರೆ. ಪ್ರಕಾಶನ ಸಂಸ್ಥೆಯೊಂದನ್ನು ಕಟ್ಟಿ ಇಪ್ಪತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಪ್ರಕಟಿಸಿದ ಚನ್ನವೀರಶಾಸ್ತ್ರೀ ಸಾಹಿತ್ಯ ಕೃಷಿಯಲ್ಲೂ ಉತ್ತಮ ಫಸಲು ನೀಡಿದ್ದಾರೆ. ಸಂಗೀತ ಶಿಕ್ಷಕರ ನೇಮಕಾತಿಯನ್ನು ಸರಕಾರ ಮಾಡಿಕೊಳ್ಳುವಲ್ಲಿ ಶ್ರೀ ಚೆನ್ನವೀರಶಾಸ್ತ್ರೀಯವರ ಹೋರಾಟದ ಹಾದಿ ಗಮನಿಸುವಂತಹದ್ದು, ದೆಹಲಿ, ಕೋಲ್ಕತ್ತಾ, ಮುಂಬಯಿ, ಮದ್ರಾಸ, ಹೈದ್ರಾಬಾದ್ ಮೊದಲಾದಡೆಗಳಲ್ಲಿ ಮೊದಲಾದಡೆಗಳಲ್ಲಿ ಸಂಗೀತ ಕಚೇರಿಗಳನ್ನು ನಡೆಸಿದ್ದಾರೆ. ಸಂಗೀತ ಸಮ್ಮೇಳನ, ಉತ್ಸವಗಳನ್ನು ಸಂಘಟಿಸಿದ ಚತುರರು ಇವರು. ಮೂರು ದಶಕಗಳ ಅವರ ಬದುಕು ಮುಳ್ಳಿನಹಾಸಿಗೆಯಂತದ್ದು, ಸದಾ ಹಸನ್ಮುಖಿಯಾಗಿ ನಿರಂತರ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಾವುದೇ ಫಲಾಪೇಕ್ಷೆಯಿಲ್ಲದ ಸೇವೆ ಅವರದು.