ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕಳುವಿನಿಂದ ಅಕ್ರಮವಾಗಿ ಮರಳು ತುಂಬಿಕೊಂಡು ಹೊರಟಿದ್ದ ಟಿಪ್ಪರನವರ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ ಜಿಲ್ಲೆಯ ಕೊಣ್ಣೂರು ಗ್ರಾಮದ ಪರಶುರಾಮ ಗಂಗೂರ ಮತ್ತು ಇಳಕಲ್ಲನ ಪ್ರದೀಪಕುಮಾರ ಹಿರೇಮಠ ಇವರು ಪ್ರಕರಣದ ಆರೋಪಿ ಸ್ಥಾನದಲ್ಲಿದ್ದಾರೆ.
ಈ ಇಬ್ಬರೂ ಅಶೋಕ ಲೆಲ್ಯಾಂಡ್ ಕಂಪನಿಯ ಟಿಪ್ಪರ ನಂಬರ: ಕೆ.ಎ:೩೭ ಬಿ:೦೯೩೪ ನೇದ್ದರಲ್ಲಿ ಯಾವುದೇ ರಾಯಲ್ಟಿ ಇಲ್ಲದೇ ಕಳುವಿನಿಂದ ಅಕ್ರಮವಾಗಿ ಮರಳು ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ತೆಗೆದುಕೊಂಡು ಹೊರಟಾಗ ಸಿಕ್ಕಿದ್ದು ಇಲ್ಲಿನ ಪಿಎಸ್‌ಐ ಸಂಜಯ ತಿಪರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.