ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಅಪ್ರಾಪ್ತೆ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾದ ಘಟನೆ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ.
ಅದೇ ಪಟ್ಟಣದ ಭಾಗ್ಯಾ ಹಳ್ಳಿ ಮೃತ ದುರ್ದೈವಿ. ಸ್ನೆಹಿತೆಯ ಅಣ್ಣನ ಜೊತೆ ಸಲುಗೆಯಿಂದ ಮಾತನಾಡಿದ್ದನ್ನು ತಪ್ಪಾಗಿ ಭಾವಿಸಿದ ಆತ ಮೈ ಕೈ ಮುಟ್ಟಿ ಮಾತನಾಡುವದು, ಲೈಂಗಿಕ ಕಿರುಕುಳ ನೀಡುವದಕ್ಕೆ ಬೇಸತ್ತು ತಮ್ಮ ಮನೆಯ ಮೇಲ್ಛಾವಣಿಯ ಜೋಕಾಲಿ ಕಟ್ಟುವ ಕಬ್ಬಿಣದ ಕೊಂಡಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮೃತಳ ತಾಯಿ ಲಕ್ಷಿö್ಮÃಬಾಯಿ ನೀಡಿದ ದೂರಿನ ಆಧಾರದ ಮೇಲೆ ಸಂಗಮೇಶ ಜುಂಜುವಾರ, ಚಿದಾನಂದ ಕಟ್ಟಿಮನಿ, ಮೌನೇಶ ಮಾದರ, ರಾಘವೇಂದ್ರ ಮಸಿಬಿನಾಳ, ಸಂಗಮೇಶ ಮಾದರ ಮತ್ತು ಗದ್ದೆಪ್ಪ ಸಿದ್ದಾಪೂರ(ಅಪ್ರಾಪ್ತ) ಇವರ ಮೇಲೆ ಪ್ರಕರಣ ದಾಖಲಾಗಿದೆ.