ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಮಠ, ಮಂದಿರಗಳಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಳ್ಳಬೇಕು ಎಂದು ಉದ್ದಿಮೇದಾರ ವೆಂಕಟೇಶ ಗುತ್ತೇದಾರ ಹೇಳಿದರು.
ತಾಲೂಕಿನ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದಲ್ಲಿ ಲಿಂ.ರುದ್ರಮುನಿ ಶಿವಾಚಾರ್ಯರ ೪೭ನೇ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡ ಉಜ್ಜಯಿನಿ ಶ್ರೀಮದ್ ಸಿದ್ದಲಿಂಗ ಜಗದ್ಗುರುಗಳ ಪುರಾಣ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಪ್ರಧಾನ ಸಮಾಜದಲ್ಲಿ ಸಂಪ್ರದಾಯ, ಧರ್ಮಾಚರಣೆ, ಧಾರ್ಮಿಕ ಸಂಸ್ಕಾರ, ಸಂಸ್ಕೃತಿ, ಆಚಾರ-ವಿಚಾರ ನೈತಿಕ ಮೌಲ್ಯಗಳನ್ನು ಮನವರಿಕೆ ಮಾಡುವುದು ಅತ್ಯವಶ್ಯಕವಾಗಿದೆ ಎಂದರು.
ಈ ವೇಳೆ ಮಳ್ಳಿ ಶ್ರೀಮಠದ ರುದ್ರಮುನಿ ಶಿವಾಚಾರ್ಯರು, ಚಿಕ್ಕರೂಗಿಯ ಈರಣ್ಣ ಶಾಸ್ತಿçಗಳು, ಶಂಕರಗೌಡ ಬಿರಾದಾರ, ಮಹೇಶ ಹಿರೇಮಠ, ಸಿದ್ದು ಬೇನಾಳ, ರಾಮನಗೌಡ ದೋರನಳ್ಳಿ ಸೇರಿದಂತೆ ಯಂಕಂಚಿ, ಚಟ್ಟರಕಿ, ಮಂಗಳೂರ, ಕುಂಟೋಜಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಶ್ರೀಮಠದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.