೨೦೦೦ಕಿ.ಮೀ. ೫೫ ದಿನಗಳ ಪಯಣ | ಸತತ ೩೫ ವರ್ಷಗಳಿಂದ ವ್ರತಧಾರಣೆ | ೨೫ವರ್ಷದಿಂದ ಪಾದಯಾತ್ರೆ
ಉದಯರಶ್ಮಿ ದಿನಪತ್ರಿಕೆ
ವರದಿ: ರಶ್ಮಿ .ಎಂ. ನೂಲಾನವರ
ಸಿಂದಗಿ: ನಿರಂತರವಾಗಿ ೨೫ ವರ್ಷಗಳಿಂದ ಸುಮಾರು ೨೦೦೦ಕಿ.ಮೀ ೫೫ದಿನಗಳವರೆಗೆ ಪಾದಯಾತ್ರೆಯ ಮೂಲಕ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದರುಶನ ಪಡೆಯುವ ಭಕ್ತರೊಬ್ಬರು ಸಿಂದಗಿ ನಗರಕ್ಕೆ ಮಂಗಳವಾರ ಆಗಮಿಸಿದ್ದರು. ಅವರನ್ನು ಪಟ್ಟಣದ ಎಪಿಎಂಸಿ ಯಾರ್ಡಿನ್ ಶ್ರೀಧರ್ಮಶಾಸ್ತಾ ಸನ್ನಿಧಾನಂನ್ ಅಯ್ಯಪ್ಪಸ್ವಾಮಿ ಮಾಲಾಧಾರಿ ಕಿರಣ ಶಿವಸಿಂಪಿ ಗುರುಸ್ವಾಮಿ ಹಾಗೂ ವ್ರತಧಾರಿಗಳು ಅವರನ್ನು ಸ್ವಾಗತಿಸಿ, ಭಕ್ತಿಪೂರ್ವಕವಾಗಿ ಬೀಳ್ಕೊಟ್ಟರು.
ಉಪೇಂದ್ರಸ್ವಾಮಿ ಪೂಜಾರಿ ಎಂಬುವವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ನಿವಾಸಿ. ಇವರೇ ಈ ಯಾತ್ರೆಯ ಭಕ್ತರು. ಹಲವು ವರ್ಷಗಳ ಹಿಂದಯೇ ಜೀವನೋಪಾಯಕ್ಕಾಗಿ ಉದ್ಯೋಗವನ್ನು ಆವರಿಸಿಕೊಂಡು ದೂರದ ಮುಂಬೈ ಪಟ್ಟಣಕ್ಕೆ ತೆರಳಿದ್ದರು. ೧೯೮೯ರಲ್ಲಿ ಮುಂಬೈನಲ್ಲಿ ಯಾರೋಬ್ಬರು ಶಬರಿಮಲೆ ಸ್ವಾಮಿ ಅಯ್ಯಪ್ಪನ ವ್ರತ ಆಚರಣೆ ಮಾಡು ಮಾಲೆ ಧರಿಸು ಎಂದು ಹೇಳಿದ್ದಕ್ಕಾಗಿ ಭಕ್ತಿಯಿಂದ ಮಾಲೆ ಧರಿಸಿ ಸು.೩-೪ ವರ್ಷಗಳವರೆಗೆ ಶಬರಿಗೆ ಹೋಗಿ ಬಂದಿದ್ದರು. ೩೫ವರ್ಷಗಳಿಂದ ಅಯ್ಯಪ್ಪ ಸ್ವಾಮಿಯ ಮಾಲೆಯನ್ನು ಧರಿಸುತ್ತಲೇ ಬಂದಿದ್ದಾರೆ. ಇವರು ಶಬರಿಮಲೆಗೆ ಕಾಲ್ನಡಿಗೆಯ ಮುಖಾಂತರ ಬರುತ್ತೇನೆ ಎಂದು ೧೯೯೩ರಲ್ಲಿ ಹರಕೆಯನ್ನು ಹೋರುತ್ತಾರಂತೆ, ೧೯೯೯ರಿಂದ ಈ ಅಯ್ಯಪ್ಪನ ಭಕ್ತ್ತ ಸತತವಾಗಿ ಪಾದಯಾತ್ರೆ ಮಾಡುತ್ತಿದ್ದು, ಪ್ರಸ್ತುತ ೨೫ ವರ್ಷಗಳಾಯಿತು. ಪ್ರತಿಬಾರಿಯೂ ಬರಿಗಾಲಿನಲ್ಲಿ ಮುಂಬೈ ನಿಂದ ಪ್ರಾರಂಭವಾಗುವ ಪಾದಯಾತ್ರೆಯು ಕರ್ನಾಟಕ, ಆಂಧ್ರ, ತಮಿಳುನಾಡು ಮುಖಾಂತರ ಕೇರಳದ ಶಬರಿಮಲೆಗೆ ಜನೆವರಿ ತಿಂಗಳ ಮಕರ ಸಂಕ್ರಮಣದಂದು ಕೊನೆಕೊಳ್ಳುತ್ತದೆ.
ಸಿಂದಗಿ ನಗರವನ್ನು ಪ್ರವೇಶಿಸಿದ ಉಪೇಂದ್ರ ಸ್ವಾಮಿಯನ್ನು ಪಟ್ಟಣದ ಎಪಿಎಂಸಿ ಯಾರ್ಡಿನ್ ರೈತ ಭವನದಲ್ಲಿರುವ ಶ್ರೀಧರ್ಮಶಾಸ್ತಾ ಸನ್ನಿಧಾನಂ ಮಾಲಾಧಾರಿಗಳು ಕಿರಣ ಶಿವಸಿಂಪಿ ಗುರುಸ್ವಾಮಿಗಳು, ಆನಂದ ಮಲ್ಲೇದ, ಬಸವರಾಜ ನಾವಿ, ಪ್ರವೀಣ, ಅರವಿಂದ ವಸ್ತçದ ಗುರುಸ್ವಾಮಿಗಳ ನೇತೃತ್ವದಲ್ಲಿನ ತಂಡದ ವ್ರತಧಾರಿಗಳು ಭಕ್ತಿಯಿಂದ ಸ್ವಾಗತಿಸಿ ನಗರದ ಪ್ರಮುಖ ರಸ್ತೆಗಳ ಮೂಲಕ ಭಕ್ತಿಯಿಂದ ಅಯ್ಯಪ್ಪಸ್ವಾಮಿಯ ಜಯಘೋಷದೊಂದಿಗೆ ಮುಂದಿನ ಪಯಣಕ್ಕೆ ಬೀಳ್ಕೊಟ್ಟರು.
“ಯಾವುದೇ ಆಸೆ, ಸಂಕಲ್ಪವನ್ನು ಇಟ್ಟುಕೊಳ್ಳದೇ ಆತ್ಮಶಾಂತಿಗಾಗಿ ೨೫ ವರ್ಷದಿಂದ ಶಬರಿಮಲೆಗೆ ಪಾದಯಾತ್ರೆ ಹಮ್ಮಿಕೊಂಡಿರುವೆ. ಮಾರ್ಗ ಮಧ್ಯದಲ್ಲಿ ಯಾರಾದರೂ ಜೊತೆಯಾದರೆ ಅವರನ್ನು ಸೇರಿಕೊಂಡ ೫೫ನೆಯ ದಿನಕ್ಕೆ ಮಕರ ಜ್ಯೋತಿಯ ದಿವಸ ತಲುಪುತ್ತೇನೆ.
– ಉಪೇಂದ್ರಸ್ವಾಮಿ ಪೂಜಾರಿ
ಶಬರಿಮಲೆ ಪಾದಯಾತ್ರಿ
ಕೋಟ್ ೨
“ಸತತ ೨೫ವರ್ಷಗಳಿಂದ ಮುಂಬೈ ನಿವಾಸಿ ಉಪೇಂದ್ರ ಸ್ವಾಮಿ ಅವರು ಮುಂಬೈಯಿಂದ ಶಬರಿಮಲೆಗೆ ಪಾದಯಾತ್ರೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಅಯ್ಯಪ್ಪ ಸ್ವಾಮಿ ಅವರಿಗೆ ಇನ್ನಷ್ಟೂ ಶಕ್ತಿ ಮತ್ತು ಆಶೀರ್ವಾದ ಮಾಡಲಿ.
– ಕಿರಣ ಶಿವಸಿಂಪಿ
ಸಿಂದಗಿ ಶ್ರೀ ಧರ್ಮಶಾಸ್ತಾ ಸೇವಾ ಸಮಿತಿ ಕಾರ್ಯದರ್ಶಿ