ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕಾಡಳಿತ, ತಾಲೂಕು ಪಂಚಾಯತ್ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯಂಗವಾಗಿ ಸೋಮವಾರ ವಿಕಲಚೇತನ ಸಪ್ತಾಹದ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು.
ಜಾಥಾ ಉದ್ದೇಶಿಸಿ ವಿಕಲಚೇತನರ ನೋಡಲ್ ಅಧಿಕಾರಿ ರವೀಂದ್ರ ಗುದಗೆನ್ನವರ ಮಾತನಾಡಿ,ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕುರಿತು ಜಾಗೃತಿ, ಸಮಾನ ಅವಕಾಶ ಹಾಗೂ ಸೌಲಭ್ಯ ಕಲ್ಪಿಸುವುದು ಈ ದಿನದ ಉದ್ದೇಶವಾಗಿದೆ. ಇಂದು ವಿಕಲಚೇತನರು ಎಲ್ಲ ರಂಗಗಳಲ್ಲಿ ಸಾಧನೆ ಮಾಡಿದ್ದಾರೆ. ವಿಕಲಚೇತನರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಸದುಪಯೋಗವನ್ನು ವಿಕಲಚೇತನರು ಪಡೆದುಕೊಳ್ಳಬೇಕೆಂದರು.
ವಿಕಲಚೇತನ ರಾಜ್ಯ ಪ್ರಶಸ್ತಿ ಪುರಸ್ಕ್ರತರಾದ ಬಂದೇನವಾಜ ವಾಲೀಕಾರ ಮಾತನಾಡಿ, ವಿಕಲಚೇತನರ ಬಗ್ಗೆ ಸಮಾಜ ಗೌರವದಿಂದ ಕಾಣುವ ಮೂಲಕ ಅವರಿಗೂ ಎಲ್ಲರಂತೆ ಬದುಕಲು ಅವಕಾಶಕೊಡಬೇಕು. ವಿಕಲಚೇತನರಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಅವರನ್ನು ಗುರುತಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ತರುವ ಕಾರ್ಯ ನಡೆಯಬೇಕು. ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ವಿಕಲಚೇತನರಿಗೆ ಸರಿಯಾಗಿ ತಲುಪಿಸುವಂತೆ ಕಾರ್ಯನಿರ್ವಹಿಸಬೇಕೆಂದರು.
ಜಾಥಾದಲ್ಲಿ ಮನಗೂಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಐ. ರೇವೂರಕರ, ಶಿವಗಂಗಪ್ಪ ಬಿರಾದಾರ, ಹೊಗ್ಗಪ್ಪ ಹೊಸಮನಿ, ಜಾನಕಿ ಚವ್ಹಾಣ, ಪ್ರತಿಭಾ ಪರೆಣ್ಣನವರ, ವಿಠ್ಠಲ ಕಣಬೂರ, ದ್ಯಾಯವ್ವ ವಗ್ಗರ, ರಂಗು ಸಾಳುಂಕೆ,ಶಿವಪ್ಪ ಹಣಮಶೆಟ್ಟಿ, ಸಲ್ಮಾಬಾನು ಸೌದಾಗರ,, ಮೋಹನ ಪವಾರ, ನಾರಾಯಣ ಜಗತಾಪ, ಗಾಲಿಬಸಾಬ ಬಾಗಲಕೋಟ, ಸಂಜು ಪವಾರ, ಗಂಗಾಧರ ಬಡಿಗೇರ, ಮರುಳಪ್ಪ ಮಾದರ, ಪ್ರವೀಣ ರಜಪೂತ, ಈರಮ ಧರಿಕಾರ, ಪರಶುರಾಮ ಅರಸನಾಳ, ದ್ಯಾಮಣ್ಣ ಪೂಜಾರಿ, ಕಾವ್ಯ ಮನಗೂಳಿ, ಶಂಕ್ರೆಪ್ಪ ದಿನ್ನಿ, ಲಕ್ಷ್ಮಣ ಚಲವಾದಿ, ಮುತ್ತಪ್ಪ ಕೋಲಕಾರ ಸೇರಿದಂತೆ ಇತರರು ಭಾಗವಹಿಸಿದ್ದರು.