ಉದಯರಶ್ಮಿ ದಿನಪತ್ರಿಕೆ
ಇಂಡಿ: ಡಾ.ರಾಜೇಂದ್ರ ಪ್ರಸಾದ ಅವರ ಜನ್ಮದಿನದ ಸವಿ ನೆನಪಿಗಾಗಿ ವಕೀಲರ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಕೋಟೆಪ್ಪ ಕಾಂಬಳೆ ಹೇಳಿದರು.
ಅವರು ಪಟ್ಟಣದ ನ್ಯಾಯಾಲದ ವಕೀಲರ ಭವನದಲ್ಲಿ ನಡೆದ ವಕೀಲರ ದಿನಾಚರಣೆ ಮತ್ತು ಹೊಸ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಅನ್ಯಾಯಕ್ಕೆ ಒಳಗಾದ ಕಕ್ಷೀದಾರರ ಪರವಾಗಿ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿ ತಮ್ಮ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಟ್ಟಾಗ ಕಕ್ಷಿದಾರರಿಗೆ ಆಗುವ ಸಂತೋಷ ಸಾರ್ಥಕ ಭಾವಕ್ಕೆ ಬೆಲೆ ಕಟ್ಟಲಾಗದು ಎಂದು ತಿಳಿಸಿದರು.
ವಕೀಲರ ವೃತ್ತಿಯ ಘನತೆ ಗೌರವ ಕಾಪಾಡಿಕೊಂಡು ಹೋಗುವದು ವಕೀಲರ ಜವಾಬ್ದಾರಿಯಾಗಿದೆ ಎಂದರು.
ವಕೀಲರ ಸಂಘದ ನೂತನ ಅಧ್ಯಕ್ಷ ಎಸ್.ಬಿ.ಬೂದಿಹಾಳ ಮಾತನಾಡಿ ಇಂಡಿಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತರುವ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ತಿಳಿಸಿದ ಅವರು ರೈಲು ನಿಲ್ದಾಣ ರಸ್ತೆಯಲ್ಲಿ ಸ್ಥಳ ಗುರುತಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ನ್ಯಾಯವಾದಿ ಎ.ಎಂ.ಬಿರಾದಾರ ಮಾತನಾಡಿ ನ್ಯಾಯಾಲಯ ಕಲಾಪ ಸೂಸುತ್ರವಾಗಿ ನಡೆಯಬೇಕಿದ್ದರೆ ಇಡೀ ನ್ಯಾಯಾಲಯ ಒಂದು ತಂಡವಾಗಿ ಕೆಲಸ ಮಾಡಬೇಕಿದೆ ಎಂದರು.
ನ್ಯಾಯವಾದಿಗಳಾದ ಅಜೀತ ಧನಶೆಟ್ಟಿ, ಮಲ್ಲೇಶಿ ಎಂಬತ್ನಾಳ, ಎಂ.ಬಿ. ಮಾಣಿಕ, ಜೆ.ಬಿ.ಬೇನೂರ, ಜಿ.ಎಸ್.ಜೋಶಿ ವಕೀಲರು ಮಾತನಾಡಿದರು.
ವೇದಿಕೆಯ ಮೇಲೆ ಕಿರಿಯ ಶ್ರೇಣಿ ನ್ಯಾಯಾಧೀಶ ಸುನೀಲಕುಮಾರ ಎಸ್.ಎಮ್, ವಕೀಲರ ಸಂಘದ ಉಪಾಧ್ಯಕ್ಷ ಅಶೋಕ ಗಜಾಕೋಶ, ಎನ್.ಕೆ ನಾಡಪುರೋಹಿತ, ಸರಕಾರಿ ಅಭಿಯೋಜಕ ಆಯ್.ಕೆ ಗಚ್ಚಿನ ಮಹಲ, ರಾಖಿ ಕಟ್ಟಿಮನಿ ಮತ್ತಿತರರಿದ್ದರು.
ವಕೀಲರ ಸಂಘದ ಅಧ್ಯಕ್ಷರಾಗಿ ಎಸ್.ಬಿ.ಬೂದಿಹಾಳ,ಉಪಾಧ್ಯಕ್ಷ ಅಶೋಕ ಗಜಾಕೋಶ, ಕಾರ್ಯದರ್ಶಿ ಎನ್.ಕೆ ನಾಡಪುರೋಹಿತ, ಸಹಕಾರ್ಯದರ್ಶಿ ವಿ.ಎಸ್.ಚಲವಾದಿ, ಖಜಾಂಚಿ ವಾಯ್.ಎಸ್.ಪೂಜಾರಿ, ಸದಸ್ಯರಾಗಿಎಂ.ಜೆ. ಪೂಜಾರಿ, ಎಂ.ಡಿ. ಮಣೂರ,ಆರ್.ಆರ್. ಕೋಳೇಕರ್, ಅಪೂರ್ವ ಮೋರೆ, ಸೇರಿದಂತೆ ಸಲಹಾ ಸಮಿತಿ ಅಧ್ಯಕ್ಷ ಅಜೀತ ಧನಶೆಟ್ಟಿ, ಎಂ.ಸಿ. ಬಿರಾದಾರ, ಜಿ.ಆರ್. ಕಾಂಬಳೆ, ಪಿ.ಜಿ. ನಾಡಗೌಡ, ಎಂ.ಎಸ್. ಪಾಟೀಲ, ಅನೀಲ ಜೋಶಿ, ಆರ್.ಆರ್. ಕೋಳಿ ಸೇರಿದಂತೆ ಮತ್ತಿತರರು ಪದಗ್ರಹಣ ಮಾಡಿದರು.
ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಪಿ.ಬಿ.ಪಾಟೀಲ, ಕಾರ್ಯದರ್ಶಿ ಎಸ್.ಆರ್.ಬಿರಾದಾರ, ಬಿ.ಬಿ. ಬಿರಾದಾರ, ಹಿರಿಯ ಹಿರಿಯ ನ್ಯಾಯವಾದಿಗಳಾದ ಎಸ್.ಎಲ್.ನಿಂಬರಗಿಮಠ, ಎಂ.ಸಿ. ಬಿರಾದಾರ, ಆರ್.ಎಸ್. ವಾಘಮೋರೆ, ಪಿ.ಜಿ. ನಾಡಗೌಡ, ಎನ್.ಬಿ.ಬಿರಾದಾರ, ಕೆ.ಪಿ. ಭೈರಜಿ, ವಿ.ಪಿ, ಪಾಟೀಲ, ಪ್ರಕಾಶ ಲವಗಿ, ಮಹಾಂತೇಶ ಪಾಟೀಲ, ಜಿ.ಎಸ. ಪಾಟೀಲ, ಸೋಮು ನಿಂಬರಗಿಮಠ ಸೇರಿದಂತೆ ಐವತ್ತಕ್ಕೂ ಹೆಚ್ಚು ವಕೀಲರು ಉಪಸ್ಥಿತರಿದ್ದರು.