ಆಲಮೇಲ: ಮತಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಸಂಕಲ್ಪ ಮಾಡಿಕೊಂಡು ಜನರ ಸೇವೆ ಸಲ್ಲಿಸುತ್ತಿರುವೆ ಎಂದು ಬಿಜೆಪಿ ಅಭ್ಯರ್ಥಿ ಶಾಸಕ ರಮೇಶ ಭೂಸನೂರ ಹೇಳಿದರು.
ಅವರು ಸಮೀಪದ ದೇವರನಾವದಗಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.
ದೊರೆತಿರುವ ಹದಿನಾರು ತಿಂಗಳಲ್ಲಿ ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೆ ರಸ್ತೆನಿರ್ಮಾಣ ಮಾಡಲಾಗಿದೆ, ನೀರು, ವಿಧ್ಯುತ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಮಾಡಿ ರೈತರಿಗೆ ಅನುಕೂಲ ಮಾಡಿರುವೆ. ಮುಂದಿನ ದಿನಗಳಲ್ಲಿ ನೂತನ ಆಲಮೇಲ ತಾಲೂಕಿಗೆ ಪ್ರತಿಯೊಂದು ಇಲಾಖೆಗಳ ಕಛೇರಿಗಳ ಪ್ರಾರಂಭ, ಮಿನಿ ವಿಧಾನಸೌಧ ನಿರ್ಮಾಣಮಾಡುವ ಗುರಿ ಹೊಂದಲಾಗಿದೆ ಎಂದರು.
ಜಿಪಂ ಮಾಜಿಉಪಾಧ್ಯಕ್ಷ ಸಿದ್ದಾರಾಮ ಪಾಟೀಲ, ಶ್ರೀಮಂತಗೌಡ ನಾಗೂರ, ಯಶವಂತ್ರಾಯಗೌಡ ರೂಗಿ, ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಬಿ.ಎಚ್.ಬಿರಾದಾರ, ರಮೇಶಗೌಡ ಹವಳಗಿ, ಗುರಣ್ಣಗೌಡ ಗುಗ್ಗರಿ ಇದ್ದರು.
ಇದೇ ಸಂದರ್ಭದಲ್ಲಿ ಚಿಕ್ಕಹವಳಗಿ, ಕುಳೇಕುಮಟಗಿ, ಶಿರಸಗಿ ಗ್ರಾಮಗಳಲ್ಲಿ ಮನೆಮನೆಗೆ ಸಂಚರಿಸಿ ಮತಯಾಚನೆ ಮಾಡಿದರು
Subscribe to Updates
Get the latest creative news from FooBar about art, design and business.
Related Posts
Add A Comment