ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆನಂದವನ್ನು ಸಂಗ್ರಹಿಸಬೇಕಾದರೆ ಪುಸ್ತಕಗಳನ್ನು ಸಂಗ್ರಹಿಸು, ಪುಸ್ತಕಗಳು ಆಯಾಕಾಲದ ಸಂಸ್ಕೃತಿಯ ಜೀವಂತ ಪ್ರತೀಕ, ಗತಕಾಲದ ಆತ್ಮ ಪುಸ್ತಕಗಳಲ್ಲಿದೆ ಎ೦ದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು
ಅವರು ನ.೨೬ ರಂದು ಜಿಲ್ಲಾಧಿಕಾರಿ ಕಚೇರಿ ಸಭಾಗಂಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕನ್ನಡ ಪುಸ್ತಕ ಪರಿಷತ್ ಸಮ್ಮೇಳನ ವಿಜಯಪುರದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು .
ಸಾಹಿತಿ ಶಂಕರ ಬೈಚಬಾಳ ಮಾತನಾಡಿ ಲೇಖಕ, ಪ್ರಕಾಶಕ , ಓದುಗರ ನಡುವೆ ಪರಿಷತ್ತು ವೈಶಿಷ್ಠ್ಯ ಪೂರ್ಣ ಚಟುವಟಿಕೆಗಳನ್ನು ಮಾಡುತ್ತಿದ್ದು, ಡಿಸೆಂಬರ್ ೧ ರಂದು ನಗರದ ಚೇತನಾ ಕಾಲೇಜು ಆವರಣದಲ್ಲಿ ನಡೆವ ಕನ್ನಡ ಪುಸ್ತಕ ಪರಿಷತ್ತಿನ ಸಮ್ಮೇಳನಕ್ಕೆ ಆಗಮಿಸಲು ಆಸಕ್ತರೆಲ್ಲರಿಗೂ ಆಮಂತ್ರಣ ನೀಡಿ ಸಮ್ಮೇಳನಕ್ಕೆ ಬರಲು ವಿನಂತಿಸಿದರು.
ಸಭೆಯಲ್ಲಿ ಡಿ. ಜೊಶೇಫ್ , ಸಿದ್ಧರಾಮ ಬಿರಾದಾರ, ಜೂನಿಯರ್ ಶಿವರಾಜಕುಮಾರ, ಅಡಿವಿಸ್ಟಾಮಿ ಕೊಳಮಲಿ, ಕೆ.ಎಸ್.ಬಾಗೇವಾಡಿ, ಗಂದನಗೌಡ ಕೆಸರಪೆಂಟಿ, ಮುಂತಾದವರು ಇದ್ದರು .

