ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಕಾಳಗಿ ಗ್ರಾಮದ ಅಪ್ರಾಪ್ತ ಬಾಲಕ ಸುರೇಶ ಮಾದರ(೧೬) ಕಾಣೆಯಾಗಿದ್ದಾನೆ ಎಂದು ಸುರೇಶ ನ ತಂದೆ ಶಿವಾನಂದ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಜಿಲ್ಲೆಯ ಉತ್ನಾಳ ಗ್ರಾಮಕ್ಕೆ ಹೋಗಿ ಬರುವದಾಗಿ ತಿಳಿಸಿ ಹೋದವನು ಮರಳಿ ಮನೆಗೆ ಬಾರದೇ ಎಲಿಯೋ ಹೋಗಿ ಕಾಣೆಯಾಗಿದ್ದಾನೆ. ಅವನನ್ನು ಯಾರೋ ಅಪಹರಿಸಿರಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಫೋಟೋದಲ್ಲಿರುವ ಬಾಲಕ ಯಾರಿಗಾದರೂ ಕಂಡಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ವಿನಂತಿಸಿದ್ದಾರೆ.

