ನೀರಿಲ್ಲದೇ ಒಣಗುತ್ತಿರುವ ಕಟಾವಿಗೆ ಬಂದ ಬೆಳೆ
ವಿಜಯಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಪದಾಧಿಕಾರಿಗಳು ರೈತರೊಡಗೂಡಿ ಕೋಲಾರ ತಾಲೂಕಿನಾಧ್ಯಂತ ಕಾಲುವೆಗೆ ನೀರು ಹರಿಸಬೇಕೇಂದು ಆಗ್ರಹಿಸಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿ ಶೀಘ್ರದಲ್ಲಿ ನೀರು ಬಿಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹಾಗೂ ಕೋಲಾರ ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಕೋಲಾರ ಹಾಗೂ ಬಬಲೇಶ್ವರ ತಾಲೂಕಿನಾಧ್ಯಂತ ಕೆಲವೇ ದಿನಗಳಲ್ಲಿ ಕಟಾವಿಗೆ ಬಂದು ನಿಂತಿರುವ ಸೆಂಗಾ, ಉಳ್ಳಾಗಡ್ಡಿ, ಮೆಕ್ಕೆಜೋಳದ ಸೇರಿದಂತೆ ಇನ್ನಿತರ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ಈ ಭಾಗದ ರೈತರು ಸಾಲ ಸೋಲ ಮಾಡಿ ಬೆಳೆದ ಬೆಳೆ ನೀರಿಲ್ಲದೇ ನಷ್ಟ ಹೊಂದುತ್ತಿರುವುದು ದುಃಖದ ವಿಷಯ. ಆದ್ದರಿಂದ ತಾವುಗಳು ಈ ಕೂಡಲೇ ಇನ್ನು ಒಂದು ವಾರಗಳ ಕಾಲ ನೀರನ್ನು ಕಾಲುವೆಗೆ ಹರಿಸಬೇಕು. ಇದರಿಂದ ಸಾಕಷ್ಟು ರೈತರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದಲ್ಲಿ ರೈತರು ಆತ್ಮಹತೈ ಮಾಡಿಕೊಳ್ಳುವ ಸಂದರ್ಭ ಎದುರಾಗಬಹುದು ಎಂದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳೊಡನೆ ಮಾತನಾಡಿ ಸಾಧ್ಯವಿದ್ದರೆ ಖಂಡಿತವಾಗಿಯೂ ನೀರು ಬೀಡುವಂತೆ ಹೇಳುತ್ತೇನೆ ಎಂದರು.
ಈ ವೇಳೆ ಶಶಿಕಾಂತ ಬಿರಾದಾರ, ಸತ್ಯಪ್ಪ ಕುಳ್ಳೊಳ್ಳಿ, ಪರಶುರಾಮ ಮಮದಾಪುರ, ರವಿಕಾಂತ ಪಾಟೀಲ, ಸಾಹೇಬಗೌಡ ಬಿರಾದಾರ, ಬಸ್ಸು ಹಂಡಿ, ಸಂಗಪ್ಪ ಗುಳಗೊಂಡ, ಮಲ್ಲಿಕಾರ್ಜುನ ರಡ್ಡೆರ, ಶಮಸರಲಿ ಮುಲ್ಲಾ, ಹಣಮಂತರಾಯಗೌಡ ಪಾಟೀಲ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.