ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವೃಕ್ಷೋಥಾನ್ ಹೆರಿಟೇಜ್ ರನ್-2024 ಅಂಗವಾಗಿ ಕೋರ್ ಕಮಿಟಿ ಮತ್ತು ವಿಜಯಪುರ ಸೈಕ್ಲಿಂಗ್ ಗ್ರುಪ್ ಪದಾಧಿಕಾರಿಗಳು ಇಂದು ರವಿವಾರ ಬೆಳಿಗ್ಗೆ ನಗರದಲ್ಲಿ ಜನಜಾಗೃತಿ ಜಾಥಾ ನಡೆಸಿದರು.
ಡಾ. ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಸೈಕ್ಲಿಂಗ್ ಮತ್ತು ಓಟದಲ್ಲಿ ಪಾಲ್ಗೊಂಡ ನೂರಾರು ಯುವಕರು ಮತ್ತು ಮಕ್ಕಳು ಐತಿಹಾಸಿಕ ಗೋಳಗುಮ್ಮಟದಲ್ಲಿ ಸೇರಿ ವೃಕ್ಷೋಥಾನ್, ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಪರ ಘೋಷಣೆ ಹಾಕಿದರು. ಅಲ್ಲದೇ, ಡಿಸೆಂಬರ್ 22 ರಂದು ನಗರದಲ್ಲಿ ನಡೆಯಲಿರುವ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳುವಂತೆ ಪ್ರವಾಸಿಗರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ನಂತರ ಗೋಳಗುಮ್ಮಟದಿಂದ ತೆರಳಿ ಅಂಬೇಡ್ಕರ್, ಬಸವೇಶ್ವರ ಹಾಗೂ ಗಾಂಧಿ ಚೌಕ್ ಮೂಲಕ ಮರಳಿ ಜಿಲ್ಲಾ ಕ್ರೀಡಾಂಗಣಕ್ಕೆ ಜಾಥಾ ಮೂಲಕ ಆಗಮಿಸಿದರು.
ಈ ಸಂದರ್ಭದಲ್ಲಿ ಡಾ. ಮಹಾಂತೇಶ ಬಿರಾದಾರ, ಡಾ.ಮುರುಗೇಶ ಪಟ್ಟಣಶೆಟ್ಟಿ, ಸಂಕೇತ ಬಗಲಿ, ವೀರೇಂದ್ರ ಗುಚ್ಚಟ್ಟಿ, ಅಪ್ಪು ಭೈರಗೊಂಡ, ಶಿವನಗೌಡ ಪಾಟೀಲ, ಅಶ್ಪಾಕ ಮನಗೂಳಿ, ಸೋಮಶೇಖರ ಸ್ವಾಮಿ, ಅನೀಲ ಧಾರವಾಡಕರ, ಸಂತೋಷ ಔರಸಂಗ, ಗುರುಶಾಂತ ಕಾಪಸೆ, ಶ್ರೀಕಾಂತ ಮಂತ್ರಿ, ಡಿ.ಕೆ.ತಾವಸೆ, ಶಿವರಾಜ ಪಾಟೀಲ, ಮಹೇಶ ವಿ. ಶಟಗಾರ, ಉಮೇಶ ಮೆಟಗಾರ, ವೀಣಾ ದೇಶಪಾಂಡೆ ಮುಂತಾದವರು ಉಪಸ್ಥಿತರಿದ್ದರು.

