ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಲಕ್ಷ್ಮೀ ಚಿತ್ರಮಂದಿರದ ಹಿಂಬದಿ ಇರುವ ಶ್ರೀ ಅಂಬಾಭವಾನಿ ದೇವಸ್ಥಾನದ ೩ನೇ ವರ್ಷದ ವಾರ್ಷಿಕೋತ್ಸವವನ್ನು ರವಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ನಸುಕಿನ ಜಾವ ದೇವಿಗೆ ವಿಶೇಶ ಅಭಿಷೇಕ, ಮಹಾ ಮಂಗಳಾರುತಿ ನೆರವೇರಿಸಿ ದೇವಿಯ ಮೂರ್ತಿಯನ್ನು ಕಿಲ್ಲಾದಲ್ಲಿನ ಲಕ್ಷ್ಮೀ ಭಾವಿಗೆ ಕರೆದೊಯ್ದು ಪವಿತ್ರ ಗಂಗೆಯಲ್ಲಿ ದೇವಿಯ ಮೂರ್ತಿಗೆ ಸ್ನಾನಾಧಿ ಕಾರ್ಯಗಳನ್ನು ಮುಗಿಸಿ ವಿಶೇಷ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ಬಳಿಕ ಸತ್ಯನಾರಾಯಣ ಪೂಜೆ, ಮಹಾ ಮಂಗಳಾರುತಿ, ಸದ್ಭಕ್ತರಿಗೆ ಮಹಾಪ್ರಸಾದ ನೆರವೇರಿಸಿ ವಾರ್ಷಿಕೋತ್ಸವವನ್ನು ಸಂಪನ್ನಗೊಳಿಸಲಾಯಿತು.
ಪೂಜಾಧಿ ಕಾರ್ಯಗಳನ್ನು ಪುರೋಹಿತರಾದ ಕಿಟ್ಟು ಅಗ್ನಿಹೋತ್ರಿ ಮತ್ತು ಪವನ ಕುಲಕರ್ಣಿ ನೆರವೇರಿಸಿದರು. ಪ್ರಮುಖರಾದ ಭರತ ಭೋಸಲೆ, ರಾಜೇಂದ್ರ ಭೋಸಲೆ, ಹಣಮಂತ ನಲವಡೆ, ಮಾರುತಿ ನಲವಡೆ, ಶಿವು ಬಿಜಾಪೂರ, ಸಚೀನ ಸಾಳುಂಕೆ, ಲೋಹಿತ ಘಾಟಗೆ, ಸಂತೋಷ ಚೌವ್ಹಾಣ, ಭೀಮಾಜಿ ಘಾಟಗೆ, ರಾಘವೇಂದ್ರ ಘಾಟಗೆ, ವಿಶ್ವನಾಥ ಸಿಂಧೆ, ರವಿ ನಲವಡೆ, ಕಿರಣ ದುದಾನಿ, ಅಣ್ಣಾಜಿ ಪವಾರ, ರಾಜು ಜಾಧವ, ಅಂಬಾಜಿ ಘಾಟಗೆ, ಗಣೆಶ ಘಾಟಗೆ, ತಾನಾಜಿ ಜಕತಾಪ, ರಾಹುಲ ಕನಸೆ, ಶಂಕರ ಪವಾರ, ಸಂದೀಪ ಸಾಳುಂಕೆ, ಅಮಿತ ಗಾಯಕವಾಡ, ವಿನೋದ ಪವಾರ, ವಿನಾಯಕ ಘಾಟಗೆ, ಅಮರ ಭೋಸಲೆ, ಲೋಹಿತ ಘಾಟಗೆ, ಅಣ್ಣಾಜಿ ಪವಾರ, ಗಜಾನನ ನಲವಡೆ, ಅಂಬಾಜಿ ಘಾಟಗೆ ಸೇರಿದಂತೆ ಮತ್ತೀತರರು ಇದ್ದರು.

