ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಬಲೇಶ್ವರ ತಾಲೂಕಿನಲ್ಲಿ ನಾನಾ ಗ್ರಾಮಗಳಲ್ಲಿ ನವೆಂಬರ್ 11 ರಿಂದ 29ರ ವರೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಸೂಚನೆಯಂತೆ ಸಾಮಾಜಿಕ ಭದ್ರತೆ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವ ಸಲುವಾಗಿ ನಾನಾ ಪಿಂಚಣಿ ಅದಾಲತ ಆಯೋಜಿಸಲಾಗಿದೆ.
ನವೆಂಬರ್ 11 ರಂದು ಬೆಳಿಗ್ಗೆ 11 ಗಂಟೆಗೆ ಅರ್ಜಣಗಿಯಲ್ಲಿ, ಮಧ್ಯಾಹ್ನ 1 ಗಂಟೆಗೆ ಬೋಳಚಿಕ್ಕಲಕಿ ಗ್ರಾಮದಲ್ಲಿ, ನವೆಂಬರ್ 12 ರಂದು ಬೆಳಿಗ್ಗೆ 11 ಗಂಟೆಗೆ ಗುಣದಾಳದಲ್ಲಿ, ಮಧ್ಯಾಹ್ನ 1 ಗಂಟೆಗೆ ಹೊಸೂರ ಗ್ರಾಮದಲ್ಲಿ, ನವೆಂಬರ್ 13 ರಂದು ಬೆಳಿಗ್ಗೆ 11 ಗಂಟೆಗೆ ದೇವರ ಗೆಣ್ಣೂರ, ಮಧ್ಯಾಹ್ನ 1 ಗಂಟೆಗೆ ಜೈನಾಪುರ, ನವೆಂಬರ್ 14 ರಂದು ಬೆಳಿಗ್ಗೆ 11 ಗಂಟೆಗೆ ಮಮದಾಪುರ, ಮಧ್ಯಾಹ್ನ 1 ಗಂಟೆಗೆ ಕಾಖಂಡಕಿ, ನವೆಂಬರ್ 15 ರಂದು ಬೆಳಿಗ್ಗೆ 11 ಗಂಟೆಗೆ ಹಲಗಣಿ, ಮಧ್ಯಾಹ್ನ 1 ಗಂಟೆಗೆ ಕಾರಜೋಳ, ನವೆಂಬರ್ 16 ರಂದು ಮಧ್ಯಾಹ್ನ 1 ಗಂಟೆಗೆ ಸಾರವಾಡದಲ್ಲಿ, ನವೆಂಬರ್ 19 ರಂದು ಬೆಳಿಗ್ಗೆ 11 ಗಂಟೆಗೆ ನಿಡೋಣಿ, ಮಧ್ಯಾಹ್ನ 1 ಗಂಟೆಗೆ ಕುಮಠೆ, ಮಧ್ಯಾಹ್ನ 3 ಗಂಟೆಗೆ ಕಂಬಾಗಿಯಲ್ಲಿ ಪಿಂಚಣಿ ಅದಾಲತ ನಡೆಸಲಾಗುತ್ತಿದೆ.
ನವೆಂಬರ್ 20 ರಂದು ಬೆಳಿಗ್ಗೆ 11 ಗಂಟೆಗೆ ಬಬಲೇಶ್ವರದಲ್ಲಿ ಪಿಂಚಣಿ ಅದಾಲತ್ ಏರ್ಪಡಿಸಲಾಗಿದೆ.
ಈ ಪಿಂಚಣಿ ಅದಾಲತ ಕುರಿತು ಆಯಾ ಗ್ರಾಮಗಳಲ್ಲಿ ಜನರಿಗೆ ಮಾಹಿತಿ ನೀಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಅರ್ಹ ಫಲಾನುಭವಿಗಳು ನಿಗದಿತ ದಿನಾಂಕಗಳಂದು ಕಾರ್ಯಕ್ರಮದಲ್ಲಿ ಪಾಲ್ಗೋಂಡು ನಾನಾ ಸಾಮಾಜಿಕ ಭದ್ರತೆ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಚಿವ ಕಚೇರಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
