ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದಲ್ಲಿ ನ.೧೩ ರಂದು ನಿಗದಿಯಾಗಿದ್ದ ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾತ್ಕಲಿಕವಾಗಿ ದಿನಾಂಕವನ್ನು ಮುಂದೂಡಲಾಗಿದೆ. ರಾಜ್ಯದ ಮೂರು ಮತಕ್ಷೇತ್ರದಲ್ಲಿ ನ.೧೩ ರಂದು ಉಪಚುನಾವಣೆ ನಡೆಯುವದರಿಂದ ಸಮ್ಮೇಳನದಲ್ಲಿ ಸಚಿವರು, ಇಲಾಖೆಯ ಅಧಿಕಾರಿಗಳು ಭಾಗವಹಿಸಲು ಸಾಧ್ಯವಿರದೇ ಇರುವದರಿಂದ ಸಮ್ಮೇಳನದ ದಿನಾಂಕವನ್ನು ತಾತ್ಕಲಿಕವಾಗಿ ಮುಂದೂಡಲಾಗಿದೆ. ತಾಲೂಕು ಕಸಾಪ ಪದಾಧಿಕಾರಿಗಳೊಂದಿಗೆ, ಇವಣಗಿ ಗ್ರಾಮದ ಹಿರಿಯರೊಂದಿಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ನವೆಂಬರ್ ಕೊನೆ ವಾರದಲ್ಲಿ ನಿಗದಿ ಪಡಿಸಲಾಗುವುದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಡೋಣೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
