ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಉಕ್ಕಲಿ ಗ್ರಾಮದ ರೈತ ಬಾಂಧವರು ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ನಡೆಯುತ್ತಿರುವ ವಕ್ಫ್ ಹಠಾವೋ ದೇಶ ಬಚಾವೋ, ಮಾದಕ ವಕ್ಫ್ಕಾಯ್ದೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬುಧವಾರ ರೊಟ್ಟಿ ಬುತ್ತಿ ನೀಡುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತರಾದ ಅಶೋಕ ಹಾವಿನಾಳ, ಬಾಬುಗೌಡ ಬಿರಾದಾರ, ಅಶೋಕ ಮಸಳಿ, ಜೀವಪ್ಪ ಬಮನಳ್ಳಿ, ಮಲ್ಲೇಸಿ ಜುಮನಾಲ, ಬಸು ಬಡಿಗೇರ, ಶಂಕ್ರಯ್ಯ ಬಬಲೇಶ್ವರ, ಪ್ರಶಾಂತ ಬಡಿಗೇರ, ರಾಹುಲ ಕಲಗೊಂಡ, ಚಿದು ಬೆಲ್ಲದ, ಗೊಲ್ಲಾಳ ನಾದ, ಜಾವು ಮಸಳಿ, ಜಕ್ಕಪ್ಪ ನಾದ, ಮೋಹನ ಬಡಿಗೇರ, ಅಶೋಕ ಹಡಪದ, ಗಂಗಾಧರ ಬಡಿಗೇರ, ಮಹಾಂತೇಶ ಕಂಬಿ, ರಾಜು ಮಸಳಿ, ಪ್ರಜ್ವಲ ಹಂಡಿ, ಜಗು ಬಸರಿಗಿಡದ, ಭೀಮು ಹಡಪದ ಇತರರು ಇದ್ದರು.
