ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಶಾಸಕ ಬಸನಗೌಡ ಯತ್ನಾಳ ಅವರ ನೇತೃತ್ವದಲ್ಲಿ ವಿಜಯಪುರದಲ್ಲಿ ನಡೆಯುತ್ತಿರುವ ವಕ್ಫ ನಿಗಮದ ನೀತಿಯನ್ನು ವಿರೋಧಿಸಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಗುರುವಾರ ಬೇಟಿ ನೀಡಿದ ಉತ್ತರ ಕನ್ನಡ ಜಿಲ್ಲೆಯ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಮ್ ಗಾoವಕರ ಬೆಂಬಲ ಸೂಚಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ವಕ್ಫ ನಿಗಮದ ವಿರುದ್ಧ ಯತ್ನಾಳ ಅವರು ಹೂಡಿದ ಈ ಹೋರಾಟ ಅರ್ಥಪೂರ್ಣವಾದುದು, ಇದಕ್ಕೆ ನಾಡಿನ ಸಮಸ್ತರ ಬೆಂಬಲವಿದೆ. ಇಂತಹ ಕೊಳಕು ನೀತಿಯನ್ನು ಹೋಗಲಾಡಿಸಲು ಹೋರಾಟಗಾರರು ಕಸಬರಿಗೆಯಂತೆ ಆಗಬೇಕು. ಕೊಳೆ ಉಳಿಯದಂತೆ ಇದನ್ನು ಗುಡಿಸಿದಾಗ ಇದು ಸ್ವಚ್ಛ ವಾಗುತ್ತದೆ. ಆ ಕಾರ್ಯವನ್ನು ವಿಜಯಪುರದಲ್ಲಿ ಯತ್ನಾಳ ಅವರು ಮಾಡುತ್ತಿದ್ದಾರೆ. ನಮ್ಮದೇಶ ನೆಲ, ಜಲ, ಭೂಮಿಗೆ ತೊಂದರೆ ಕೊಡುವವರನ್ನು ಇಲ್ಲಿಂದ ಓಡಿಸಲು ಮತ್ತೆ ಛಲೇ ಜಾವ್ ಚಳುವಳಿ ನಡೆಸಬೇಕಾಗುತ್ತದೆ. ಈ ಕಾರ್ಯಕ್ಕೆ ನಮ್ಮ ಉತ್ತರ ಕನ್ನಡ ಜಿಲ್ಲೆಯ ಭಾರತೀಯ ಕಿಸಾನ್ ಸಂಘದ ಬೆಂಬಲ ಹೋರಾಟಕ್ಕೆ ಸದಾ ಇರುತ್ತದೆ ಎಂದರು.

