ಬಾಗಲಕೋಟ ಜಿಲ್ಲಾ ಹೊನಲು ಬೆಳಕಿನ ಕಬ್ಬಡ್ಡಿ ಚಾಂಪಿಯನ್ ಟ್ರೋಫಿ | ಮೂವತ್ತೆರಡು ತಂಡಗಳು ಭಾಗಿ | ಕಬಡ್ಡಿ ಪ್ರೇಮಿಗಳಿಗೆ ಭರಪೂರ ಮನರಂಜನೆ
ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಹೊನಲು ಬೆಳಕಿನ ಬಾಗಲಕೋಟ ಜಿಲ್ಲಾ ಕಬ್ಬಡ್ಡಿ ಚಾಂಪಿಯನ್ ಟ್ರೋಫಿಯು ಈ ಭಾಗದ ಕಬ್ಬಡ್ಡಿ ಪ್ರೇಮಿಗಳಿಗೆ ಭರಪೂರ ಮನರಂಜನೆ ನೀಡಿತು.
ಇಲ್ಲಿನ ಪಿಕೆಪಿಎಸ್ ಆವರಣದಲ್ಲಿ ಓಂ ಪ್ರಭುಲಿಂಗೇಶ್ವರ ಯುವಕರ ಕ್ರೀಡಾ ಸಂಘ ಹಾಗೂ ಬಾಗಲಕೋಟ ಜಿಲ್ಲಾ ಅಮೆಚೂರ್ ಕಬ್ಬಡ್ಡಿ ಅಸೋಶಿಯೇಷನ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಪ್ರೋ ಕಬ್ಬಡ್ಡಿ ಮಾದರಿಯ ಪಂದ್ಯಾವಳಿಯಲ್ಲಿ ಭಾಗವಹಿಸಿದ ಮೂವತ್ತೆರಡು ತಂಡಗಳು ಅತ್ಯತ್ತಮ ಪ್ರದರ್ಶನ ನೀಡುವುದರೊಂದಿಗೆ ನೆರೆದ ಸಾವಿರಾರು ಸಂಖ್ಯೆಯ ಪ್ರೇಕ್ಷಕರನ್ನು ರಂಜಿಸಿದವು.
ಬುಧವಾರ ನಡೆದ ಫಿನಾಲೆಯಲ್ಲಿ ಸೊರಗಾವಿಯ ಮಾರುತೇಶ್ವರ ಕಬ್ಬಡ್ಡಿ ತಂಡ ವಿಜಯಶಾಲಿಯಾಗುವುದರೊಂದಿಗೆ ಜಿಲ್ಲಾ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.
ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ಹಾಗೂ ಟ್ರೋಫಿ ವಿತರಣಾ ಕಾರ್ಯಕ್ರಮ ನಡೆಯಿತು.
ಸಮಾರಂಭದ ಸಾನಿಧ್ಯವನ್ನು ಬಂಡಿಗಣಿ ನೀಲಮಾನಿಕ ಮಠದ ದಾನೇಶ್ವರ ಶ್ರೀಗಳು ವಹಿಸಿದ್ದರು, ಅದ್ಯಕ್ಷತೆಯನ್ನು ಹಣಮಂತ ಕೊಣ್ಣೂರ ವಹಿಸಿದ್ದರು ಕಾರ್ಯಕ್ರಮದ ಉದ್ಘಾಟಣೆಯನ್ನು ಬನಹಟ್ಟಿ ಠಾಣಾಧಿಕಾರಿ ಶ್ರೀಮತಿ ಶಾಂತಾ ಹಳ್ಳಿ ನೆರವೇರಿಸಿದರು, ಮುಖ್ಯ ಅತಿಥಿಗಳಾಗಿ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಅಣ್ಣಪ್ಪಗೌಡ ಪಾಟೀಲ, ಬಾಳಪ್ಪ ಹಳಿಂಗಳಿ, ಉಮೇಶ ಪೂಜಾರಿ, ಮುತ್ತು ಢವಳೇಶ್ವರ, ಅಶೋಕ ಮೋಟಗಿ, ಮಹಾಲಿಂಗ ಬಳಗಾರ, ಬಾಳಪ್ಪಾ ಗಡೆಪ್ಪನವರ, ರವಿ ಬಗನಾಳ, ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ, ಸದಾಶಿವ ಕುಂಬಾರ, ಅರಭಾಜ ಜಮಖಂಡಿ, ಜಿಲ್ಲಾ ಆಮೇಚೋರ್ ಕಬ್ಬಡ್ಡಿ ಅಸೋಶಿಯೇಷನ್ ಮುಖ್ಯಸ್ಥರು ಸೇರಿದಂತೆ ಹಲವಾರು ಜನ ಪ್ರಮುಖರು ಆಗಮಿಸಿದ್ದರು.
ದ್ವಿತೀಯ & ತೃತೀಯ ಸ್ಥಾನ ಪಡೆದ ತಂಡಗಳು.
ಬೀಳಗಿ ತಾಲೂಕಿನ ಸೊನ್ನ ಗ್ರಾಮದ ಜೈಸಿದ್ದ ಕಬ್ಬಡ್ಡಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡರೆ, ಜಾನಮಟ್ಟಿಯ ಬಸವೇಶ್ವರ ಕಬ್ಬಡ್ಡಿ ತಂಡ ತೃತಿಯ ಸ್ಥಾನ ಪಡೆದುಕೊಂಡಿತು. ಹುನಗುಂದ ನಗರದ ಎಸ್‌ವಿಎಂ ಕಬ್ಬಡ್ಡಿ ತಂಡ ಸಮಾಧಾನಕರ ನಾಲ್ಕನೇ ಬಹುಮಾನಕ್ಕೆ ಅರ್ಹವಾಯಿತು.

