ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ದಿನದಿಂದ ದಿನಕ್ಕೆ ಮೊಬೈಲ್ ಬಳಕೆ ಹೆಚ್ಚಾದಂತೆ ಜಾನಪದ, ಸಂಸಾರಿಕ ನಾಟಕ ಹಾಗೂ ಬಯಲಾಟಗಳು ಮಾಯವಾಗುತ್ತಿವೆ. ಯುವಕರು ವಿದ್ಯಾಭ್ಯಾಸದ ಜೊತೆಗೆ ಸಂಗೀತದ ಆಸಕ್ತಿ ಹೊಂದಬೇಕು. ಸಂಗೀತಕ್ಕೆ ಜ್ಞಾನ ತುಂಬುವ ಶಕ್ತಿ ಅಡಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಗ್ರಾಮ ಪಂಚಾಯತಿ ಆವರಣದಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಂಗಳೂರು ಇವರ ಸಹಕಾರದಲ್ಲಿ ಶ್ರೀ ಭಾಗ್ಯವಂತಿ ಸಂಸ್ಕೃತಿಕ ಕಲಾ ನಾಟ್ಯ ಸಂಘದಿಂದ ಹಮ್ಮಿಕೊಂಡ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ಕೇಳುವುದರಿಂದ ಮನುಷ್ಯನಿಗೆ ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ಸಂಘ ರಚನೆ ಕಾರ್ಯಕ್ರಮ ಆಯೋಜಿಸಿ ಸಂಗೀತದ ಮೂಲಕ ಸಾರ್ವಜನಿಕರಿಗೆ ಜ್ಞಾನ ತುಂಬುತ್ತಿರುವ ಗ್ರಾಪಂ ಅಧ್ಯಕ್ಷರ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.
ಎನ್.ಎನ್.ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ಭಾಗ್ಯವಂತಿ ಸಾಂಸ್ಕೃತಿಕ ನಾಟ್ಯ ಸಂಘದಿಂದ ವಿವಿಧ ರೀತಿಯ ಜಾನಪದ ಕಾರ್ಯಕ್ರಮಗಳು ಜರುಗಿದವು.
ಮಹಾಂತ ಸ್ವಾಮಿಗಳು ವಿರಕ್ತಮಠ ಜೇರಟಗಿ, ಬಿಳಿಯನಿಸಿದ್ದ ಒಡಿಯರ್ ಸಾನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಎನ್.ಆರ್.ತಿವಾರಿ, ಎಂ.ಕೆ.ಕಣ್ಣಿ, ಪಿಕೆಪಿಎಸ್ ಅಧ್ಯಕ್ಷ ವೀರನಗೌಡ ಪಾಟೀಲ್, ಸಲೀಮ್ ಕಣ್ಣಿ, ಭೀಮಶಂಕರ್ ವಿಭೂತಿ ಸೇರಿದಂತೆ ಇತರರು ಇದ್ದರು.

