ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸುವರ್ಣ ಮಹೊತ್ಸವ ಕಂಡ ಮುಳವಾಡದ ಶ್ರೀ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘವೂ ಸ್ಥಾಪನೆಗೊಂಡು ಇಂದಿಗೆ ೬೨ ವರ್ಷಗಳಾದವು. ಸಂಘದಡಿಯಲ್ಲಿ ಪ್ರೌಢ ಶಾಲೆ, ಪ್ರಾಥಮಿಕ ಶಾಲೆ, ಮತ್ತು ಇಂಗ್ಲೀಷ ಮಾಧ್ಯಮ ಪ್ರಾಥಮಿಕ ಶಾಲೆಗಳು ಅಸ್ತಿತ್ವದಲ್ಲಿವೆ. ಇತ್ತೀಚೆಗೆ ಸಂಘದ ಕಾರ್ಯಕಾರಿ ಮಂಡಳಿಗೆ ಚುನಾವಣೆ ನಡೆಯಿತು. ಹನ್ನೊಂದು ಜನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಗೊಂಡರು.
ಎ.ಎಸ್. ಐಹೊಳ್ಳಿ (ಅಧ್ಯಕ್ಷರು) ಬಿ.ಆಯ್.ಪಾಟೀಲ (ಉಪಾಧ್ಯಕ್ಷರು) ಜೆ.ಎಸ್. ಕಂಚ್ಯಾಣಿ (ಗೌರವ ಕಾರ್ಯದರ್ಶಿ) ಎ.ಜಿ. ಕಳಸಗೊಂಡ (ಕೋಶಾಧಿಕಾರಿ) ಹಾಗೂ ಎಸ್.ಪಿ. ಕೆಂಗನಾಳ ಆರ್.ಡಿ. ಐಹೊಳ್ಳಿ ಆಯ್.ಕೆ. ಗುಚ್ಚೆಟ್ಟಿ, ಎಸ್.ಬಿ. ಪಾಟೀಲ ಡಾ. ಎಸ್.ಎಂ. ಕುಬಸದ, ಎಸ್.ಎಸ್. ಮಂಟೂರ, ಶ್ರೀಮತಿ ಉಮಾ ಟಿ. ಹುಂಡೇಕಾರ, ಇವರೆಲ್ಲ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಡಾ. ವಿ.ಡಿ. ಐಹೊಳ್ಳಿ ಅವರನ್ನು ಶಿಕ್ಷಣ ತಜ್ಞರಾಗಿ ಮತ್ತು ಎಸ್.ಎಚ್. ಬುಸಾರಿ ಅವರನ್ನು ಕಾನೂನು ಸಲಹೆಗಾರರನ್ನಾಗಿ ನೇಮಿಸಿ, ಗೌರವ ಸದಸ್ಯ ಸ್ಥಾನವನ್ನು ನೀಡಲಾಗಿದೆ ಎಂದು ಗೌ. ಕಾರ್ಯದರ್ಶಿಗಳಾದ ಜಂಬುನಾಥ ಕಂಚ್ಯಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
