ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಕರಾಟೆ ಶಿಕ್ಷಕ ಶಿವಕುಮಾರ ಶಾರದಳ್ಳಿ ಸಂಸ್ಥಾಪಿತ ಏಕಲವ್ಯ ರೋಲರ್ ಸ್ಕೆಟಿಂಗ್ ಅಕಾಡೆಮಿಯ ವಿದ್ಯಾರ್ಥಿಗಳು ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಸ್ಕೆಟಿಂಗ್ ಅಕಾಡಮಿ ಸ್ಪರ್ದೆಯಲ್ಲಿ ೨ಬಂಗಾರ, ೩ಬೆಳ್ಳಿ ಮತ್ತು ೫ ಕಂಚಿನ ಪದಕಗಳನ್ನು ಪಡೆಯುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.
ಅ.೨೬ ಮತ್ತು ೨೭ ರಂದು ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಸ್ಪರ್ದೆಯಲ್ಲಿ ಅಕಾಡಮಿಯ ವಿದ್ಯಾರ್ಥಿಗಳಾದ ವಿಕ್ರಾಂತ ಶಾರದಳ್ಳಿ, ಅನೂಪ ತುಪ್ಪದ, ಅದಿತಿ ನಾಗೂರ, ಸಾದ್ವಿ ನಾಗೂರ, ಕೃತಿಕಾ ತುಪ್ಪದ, ಶಕುಂತಲಾ ಶಾರದಳ್ಳಿ ಭಾಗವಹಿಸಿದ್ದರು.
೫೦೦ಮೀ ಮತ್ತು ೧೦೦೦ಮೀ ಸ್ಪರ್ದೆಯಲ್ಲಿ ಕೃತಿಕಾ ತುಪ್ಪದ ಬಂಗಾರದ ಪದಕ, ವಿಕ್ರಾಂತ ೫೦೦ಮೀ ಕಂಚಿನ ಮತ್ತು ೧೦೦೦ಮೀ ನಲ್ಲಿ ಬೆಳ್ಳಿಯ ಪದಕ, ಅದಿತಿ ೫೦೦ಮೀ ಮತ್ತು ೧೦೦೦ಮೀ ನಲ್ಲಿ ಬೆಳ್ಳಿಯ ಪದಕ, ಶ್ರೇಯಾ ಮತ್ತು ಶಕುಂತಲಾ ಕಂಚಿನ ಪದಕ ಪಡೆದು ತಾಲೂಕಿನ ಹಿರಿಮೆಯನ್ನ ಹೆಚ್ಚಿಸಿದ್ದಾರೆ.
ಇವರ ಸಾಧನೆಗೆ ಅಕಾಡಮಿಯ ವಿದ್ಯಾರ್ಥಿಗಳ ಪಾಲಕರಾದ ಬಸವರಾಜ ನಾಗೂರ, ಉಮಾ ಶಾರದಳ್ಳಿ, ನಾಗೇಂದ್ರ ಶಿವಶಿಂಪಿ, ಮಲ್ಲನಗೌಡ ಕಡಕಲ್ಲ, ವಿಜು ಪತ್ತಾರ ಸೇರಿದಂತೆ ಇನ್ನೀತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

