Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕೃಷ್ಣ ರಾಧೆಯರ ವೇಷದಲ್ಲಿ ಕಂಗೊಳಿಸಿದ ಚಿಕ್ಕಮಕ್ಕಳು

ಕೃಷ್ಣನ ವೇಷದಲ್ಲಿ ಕಂಗೊಳಿಸಿದ ಚಿಣ್ಣರು

ಸೆ.೭ರಂದು ಫೋನ್-ಇನ್ ಕಾರ್ಯಕ್ರಮ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಾದರಿಯಾದ ಪಾಲಭಾವಿ ಕುಟುಂಬದ ಪಶುಪ್ರೇಮ
(ರಾಜ್ಯ ) ಜಿಲ್ಲೆ

ಮಾದರಿಯಾದ ಪಾಲಭಾವಿ ಕುಟುಂಬದ ಪಶುಪ್ರೇಮ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬಸವನ ಅಗಲಿಕೆಗೆ ಕಂಬನಿಯ ಅಶ್ರುದರ್ಪಣ | ಶ್ರೀಗಳು, ರೈತರ ಸಮ್ಮುಖದಲ್ಲಿ ಗೌರವಯುತ ಅಂತಿಮ ಸಂಸ್ಕಾರ

ಉದಯರಶ್ಮಿ ದಿನಪತ್ರಿಕೆ

– ಇಲಾಹಿ ಇ. ಜಮಖಂಡಿ

ಚಿಮ್ಮಡ: ಬಹುತೇಕ ರೈತರು ತಮ್ಮ ಕೃಷಿ ಕಾಯಕಗಳಿಗೆ ಬೆನ್ನೆಲುಬಾಗಿ ದುಡಿಯುವ ಆಕಳು, ಎಮ್ಮೆ, ಎತ್ತುಗಳು ದುಡಿಯಲು ಅಸಹಾಯಕ ಸ್ಥಿತಿ ತಲುಪಿದಾಗ ಅವುಗಳನ್ನು ಕಸಾಯಿಖಾನೆಗೋ ಅಥವಾ ಗೋಶಾಲೆಗೋ ಸಾಗಿಸಿ ಕೈತೊಳೆದುಕೊಂಡು ಬಿಡುತ್ತಾರೆ ಆದರೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ರೈತ ಪರಪ್ಪಾ ರಾಮಪ್ಪಾ ಪಾಲಭಾವಿಯವರು ನಿಸ್ಸಹಾಯಕ ಆಕಳು, ಎತ್ತುಗಳನ್ನು ಮನೆಯ ಸದಸ್ಯರಂತೆ ಸಾಕಿ, ಸಲಹಿ ಅವು ಅಗಲಿದಾಗ ಗೌರವಯುತವಾಗಿ ಅಂತಿಮ ಸಂಸ್ಕಾರ ನೆರವೇರಿಸುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.
ಸುಮಾರು ಇಪ್ಪತ್ನಾಲ್ಕು ವರ್ಷಗಳ ಹಿಂದೆ ಖರೀದಿಸಿದ ಎತ್ತೊಂದು ಗುರುವಾರ ಸಂಜೆ ವಯೋಸಹಜ ಅಸುನೀಗಿದಾಗ ತಮ್ಮ ಬಾಗದ ರೈತರಿಗೆಲ್ಲ ಕರೆ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಆಹ್ವಾನ ನೀಡಿ ಶ್ರೀ ಪ್ರಭು ಮಹಾಸ್ವಾಮಿಜಿ, ಶ್ರೀ ಜನಾರ್ಧನ ಮಹಾರಾಜರು ಹಾಗೂ ನೂರಾರು ಜನ ರೈತರ ಸಮ್ಮುಖದಲ್ಲಿ ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸಿದರು. ಅಗಲಿದ ಬಸವನಿಗೆ ತಮ್ಮ ಮನೆಯ ಹಿರಿಯರ ಸ್ಥಾನಮಾನ ನೀಡಿದ್ದ ಪಾಲಭಾವಿ ದಂಪತಿಗಳು ಈ ಹಿರಿ ಎತ್ತನ್ನು ಮನೆಯ ಸದಸ್ಯರಂತೆಯೇ ಪ್ರೀತಿಯಿಂದ ಸಲಹುತಿದ್ದರು, ಈಗಾಗಲೇ ಐದು ಹಿರಿ ಎತ್ತುಗಳ ಸಮಾಧಿಗಳು ಪಾಲಭಾವಿ ದಂಪತಿಗಳ ಮನೆಯ ಆವರಣದಲ್ಲಿದ್ದು ಪ್ರತೀವರ್ಷ ಬಸವ ಜಯಂತಿಯಂದು ಎಲ್ಲ ಸಮಾಧಿಗಳಿಗೆ ವಿಶೇಷ ಪೂಜೆ ಹಾಗೂ ಪ್ರಸಾದ ವ್ಯವಸ್ಥೆ ಮಾಡಿಸುವ ಮೂಲಕ ತಮ್ಮಲ್ಲಿ ಒಬ್ಬರಾಗಿ ದುಡಿದ ಮೂಕಪ್ರಾಣಗಳಿಗೆ ಗೌರವ ತೋರುತಿದ್ದಾರೆ.
ತಂದೆಯ ಕಾಲದಿಂದಲೂ ಇದುವರೆಗೆ ಯಾವುದೇ ಆಕಳು, ಎತ್ತುಗಳನ್ನು ಕಸಾಯಿಖಾನೆ, ಗೋಶಾಲೆಗಳಿಗೆ ನೀಡಿದರೆ ಮನೆಯ ಸದಸ್ಯರನ್ನು ವೃದ್ದಾಶೃಮಕ್ಕೆ ಸೇರಿಸಿದಂತಾಗುತ್ತದೆ ಎಂಬ ಭಾವನೆ ಹೊಂದಿರುವ ಪರಪ್ಪಾ ಪಾಲಭಾವಿಯವರು ತಮ್ಮ ಮಕ್ಕಳಿಗೂ ಈ ಪರಂಪರೆ ಮುಂದುವರಿಸುವಂತೆ ಸಲಹೆ ನೀಡಿದ್ದಾಗಿ ತಿಳಿಸಿದ್ದಾರೆ.

“ಇಪ್ಪತ್ತರಿಂದ ಮೂವತ್ತು ವರ್ಷಗಳ ಕಾಲ ನಮ್ಮೊಂದಿಗೆ ಜೊತೆಯಾಗಿ ದುಡಿದು ನಮಗೆ ಅನ್ನ, ಆಶೀರ್ವಾದ ನೀಡಿದ ಮೂಕ ಪ್ರಾಣಿಗಳನ್ನು ಅವು ದುಡಿಯುವುದನ್ನು ನಿಲ್ಲಿಸಿವೆ ಎಂಬ ಒಂದೇ ಕಾರಣಕ್ಕಾಗಿ ನಾವು ಅವುಗಳನ್ನು ಅಗಲಿಸಿದರೆ, ಹಣಕ್ಕಾಗಿ ಕಸಾಯಿಖಾನೆಗೆ ಮಾರಾಟ ಮಾಡಿದರೆ ನಮ್ಮಂಥ ಕಠೋರ ಹೃದಯದವರು ಯಾರಿದ್ದಾರೆ? ಬಸವನನ್ನು ದೇವರೆಂದು ಭಾವಿಸಿ ಪೂಜಿಸುವ ನಾವು, ಅವುಗಳನ್ನು ಬದುಕಿರುವವರೆಗೂ ಸಾಕದಿದ್ದರೆ ಇದು ನಮ್ಮ ರೈತ ಕುಲಕ್ಕೆ ಅವಮಾನಕಾರಿ, ದೇಶದ ಸಂಸ್ಕೃತಿಗೇ ವಿರುದ್ದವಾದದ್ದು.”

– ಪರಪ್ಪಾ ರಾಮಪ್ಪಾ ಪಾಲಭಾವಿ
ಪ್ರಗತಿಪರ ರೈತರು, ಚಿಮ್ಮಡ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕೃಷ್ಣ ರಾಧೆಯರ ವೇಷದಲ್ಲಿ ಕಂಗೊಳಿಸಿದ ಚಿಕ್ಕಮಕ್ಕಳು

ಕೃಷ್ಣನ ವೇಷದಲ್ಲಿ ಕಂಗೊಳಿಸಿದ ಚಿಣ್ಣರು

ಸೆ.೭ರಂದು ಫೋನ್-ಇನ್ ಕಾರ್ಯಕ್ರಮ

೪ ಸಾವಿರಕ್ಕೂ ಅಧಿಕ ಶಿಕ್ಷಕರು ಹಳೆ ಪಿಂಚಣಿ ವ್ಯಾಪ್ತಿಗೆ :ನುಗ್ಗಲಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕೃಷ್ಣ ರಾಧೆಯರ ವೇಷದಲ್ಲಿ ಕಂಗೊಳಿಸಿದ ಚಿಕ್ಕಮಕ್ಕಳು
    In (ರಾಜ್ಯ ) ಜಿಲ್ಲೆ
  • ಕೃಷ್ಣನ ವೇಷದಲ್ಲಿ ಕಂಗೊಳಿಸಿದ ಚಿಣ್ಣರು
    In (ರಾಜ್ಯ ) ಜಿಲ್ಲೆ
  • ಸೆ.೭ರಂದು ಫೋನ್-ಇನ್ ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ೪ ಸಾವಿರಕ್ಕೂ ಅಧಿಕ ಶಿಕ್ಷಕರು ಹಳೆ ಪಿಂಚಣಿ ವ್ಯಾಪ್ತಿಗೆ :ನುಗ್ಗಲಿ
    In (ರಾಜ್ಯ ) ಜಿಲ್ಲೆ
  • ಗಜಾನನ ಮಹಾಮಂಡಳಿಗಳ ಪೂರ್ವಭಾವಿ ಸಭೆ ನಾಳೆ
    In (ರಾಜ್ಯ ) ಜಿಲ್ಲೆ
  • ಸೆ.೨೧ರಂದು ಅಂಚೆ ಅದಾಲತ್
    In (ರಾಜ್ಯ ) ಜಿಲ್ಲೆ
  • ಜನರ ಮನೆ ಬಾಗಿಲಲ್ಲೇ ಸಿಗಲಿದೆ ಪ್ರಜಾಸೇವೆ :ಶಾಸಕ ಪಾಟೀಲ
    In (ರಾಜ್ಯ ) ಜಿಲ್ಲೆ
  • ಶಿಕ್ಷಕರ ಋಣ ತೀರಿಸಲು ಸಾಧ್ಯವಿಲ್ಲ :ಬಬಲೇಶ್ವರ
    In (ರಾಜ್ಯ ) ಜಿಲ್ಲೆ
  • ’ಪ್ರಜಾಸೇವೆ’ ಆಂದೋಲನ ಯಶಸ್ವಿಗೆ ಸಹಕರಿಸಿ
    In (ರಾಜ್ಯ ) ಜಿಲ್ಲೆ
  • ಶಿಕ್ಷಕರಿಗೆ ಗೌರವಿಸುವುದು ಶ್ರೇಷ್ಠ ಕಾರ್ಯ :ಡಾ.ಸಮೀರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.