ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕ ಕೊಡಮಾಡುವ ” ಜಾನಪದ ಪ್ರಪಂಚ ” ಪ್ರಶಸ್ತಿಯನ್ನು ಬೆಂಗಳೂರಿನ ಸೇಂಟ್ ಕ್ಲಾರೆಟ್ ಕಾಲೇಜು ಸಭಾಂಗಣದಲ್ಲಿ ಕ ಜಾ ಪ ರಾಜ್ಯಾಧ್ಯಕ್ಷ ಡಾ ಎಸ್ ಬಾಲಾಜಿಯವರ ಅಧ್ಯಕ್ಷತೆಯಲ್ಲಿ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಹಣಮಾಪುರ ಹಲಗೆಮಜಲು ಕಲಾವಿದ ಗಂಗಾಧರ ಬಡಿಗೇರನಿಗೆ ನೀಡಿ ಗೌರವಿಸಲಾಯಿತು.
ರೆವರೆಂಡ್ ಫಾದರ್ ಜೋಸೆಫ್ ಎಸ್ ಸಾನಿಧ್ಯದಲ್ಲಿ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಸಚಿವ ಶಹಜಹಾನ್ ಮುದಕವಿ ಉದ್ಘಾಟಿಸಿದರು. ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ ಅಪ್ಪಗೆರೆ ತಿಮ್ಮರಾಜು, ರಾಜ್ಯ ಸಹಕಾರಿ ಮಹಾಮಂಡಳದ ನಿಬಂಧಕ ಲಕ್ಷ್ಮೀಪತಯ್ಯ , ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಜಿಲ್ಲಾಧ್ಯಕ್ಷ ಪ್ರಕಾಶ ಮೂರ್ತಿ, ದತ್ತಿದಾನಿ ಸೌಭಾಗ್ಯ ಟಿ ಕೆ ಗೌಡ , ಕನ್ನಡ ಜಾನಪದ ಪರಿಷತ್ ಬೆಂಗಳೂರು ಜಿಲ್ಲಾಧ್ಯಕ್ಷರಾದ ಡಾ ರಾಜು ಗೂಂಡಾಪುರ , ಡಾ ರಿಯಾಜ್ ಪಾಷ ಮತ್ತು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಉಪಸ್ಥಿತರಿದ್ದರು.

