ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಭಗವಂತನೊಡನೆ ಸಂಪರ್ಕ ಸಾಧನೆಯ ವಿಧಾನವೇ ಯೋಗವಾಗಿದೆ ಎಂದ ಖ್ಯಾತ ಯೋಗ ಗುರು ನಿರಂಜನ ಸ್ವಾಮೀಜಿ ಹೇಳಿದರು.
ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜು ಆವರಣದಲ್ಲಿ ಶುಕ್ರವಾರ ಆರಂಭಗೊಂಡ ಹಿಮಾಲಯನ್ ಧ್ಯಾನಯೋಗ ಹಾಗೂ ಸಾಮೂಹಿಕ ಭಜನೆ ಮತ್ತು ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯೋಗ ಮತ್ತು ಪ್ರವಚನಗಳು ನಮ್ಮ ದೈನಂದಿನ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ ಎಂದು ಹೇಳುತ್ತಾ ಸುಮಾರು ಒಂದು ಗಂಟೆ ಕಾಲ ಯೋಗದ ತರಬೇತಿ ನೀಡಿದರು.
ನಿವಾಳಖೇಡ ಗ್ರಾಮದ ಶ್ರೀಸಿದ್ಧಕೃಪಾ ಮಲ್ಲಿಕಾರ್ಜುನ ಮಹಾಂತಮಠದ ಬಸವಾನಂದ ಸ್ವಾಮೀಜಿ ಹಾಗೂ ಸ್ಥಳೀಯ ಪರದೇಶಿಮಠದಶ್ರೀ ಮಾತನಾಡಿದರು.
ರಾಮಪುರ ಆರೂಢಮಠದ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರ ತಜ್ಞ ಪ್ರಭುಗೌಡ ಲಿಂಗದಳ್ಳಿ (ಚಬನೂರ), ಸಿಂದಗಿ ಪಟ್ಟಣದ ಧುರೀಣರಾದ ಅಶೋಕ ಅಲ್ಲಾಪೂರ, ಡಾ. ಮಹಾಂತೇಶ ಹಿರೇಮಠ ಹಾಗೂ ದೇವರಹಿಪ್ಪರಗಿ ತಾಲ್ಲೂಕು ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ , ಪಂಚಾಕ್ಷರಿ ಮಿಂಚನಾಳ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಸಮೃದ್ಧಿ ಸಹಕಾರಿ ಸಂಘದ ಉಪಾಧ್ಯಕ್ಷ ರಿಯಾಜ್ ಯಲಗಾರ, ವೈದ್ಯರುಗಳಾದ ಮಂಜುನಾಥ ಮಠ, ಸತೀಶ ನಾಡಗೌಡ, ಸುರೇಶ ಸಜ್ಜನ, ಎಸ್.ಎನ್.ಬಿರಾದಾರ, ಆಯ್.ಎಸ್.ಹಿರೇಮಠ, ಕಾಶೀನಾಥ ಯಾಳಗಿ, ಉದ್ಯಮಿಗಳಾದ ಕಾಶೀನಾಥ ಸಾಲಕ್ಕಿ, ಕೆ.ಎಸ್.ಕೋರಿ, ಪ್ರಕಾಶ ಮಲ್ಲಾರಿ, ಕಾಶೀನಾಥ ಕೋರಿ, ಸೋಮಶೇಖರ ಹಿರೇಮಠ, ಶ್ರೀಶೈಲ ಕಬ್ಬಿನ, ಶಿವಪದ್ಮ ಕೂಟನೂರ, ಗಂಗಣ್ಣ ಬಬಲೇಶ್ವರ, ಎಂ.ಆರ್. ಮಠ, ಪಿ.ಜಿ.ಹಿರೇಮಠ, ಸಂಗಪ್ಪಣ ತಡವಲ್, ಎಸ್.ಎನ್.ಬಸವರೆಡ್ಡಿ, ಮಡ್ಡೆಪ್ಪಗೋಳ, ಮಹೇಶ ಬುದ್ನಿ, ಪ್ರಮೋದ ನಾಡಗೌಡ, ಸಾಗೇಬಗೌಡ ರೆಡ್ಡಿ,, ಸಂಗನಗೌಡ ಬಿರಾದಾರ, ಎ.ಕೆ.ನಾಡಗೌಡ ಸಹಿತ ಪಟ್ಟಣದ ಯುವಕರು, ಮಹಿಳೆಯರು ಇದ್ದರು.
ನ.೧೦ ವರೆಗೆ ಧ್ಯಾನಯೋಗ
ಹಿಮಾಲಯದಲ್ಲಿ ೬ ವರ್ಷಗಳ ಕಾಲ ಯೋಗ ಸಾಧನೆ ಮಾಡಿದ ಪೂಜ್ಯ ನಿರಂಜನಶ್ರೀಗಳು ದಿ: ೨೫ ರಿಂದ ನವೆಂಬರ್ ೧೦ ವರೆಗೆ ನಿರಂತರವಾಗಿ ಬೆಳಿಗ್ಗೆ ೫.೩೦ ರಿಂದ ೬.೩೦ ರವರೆಗೆ ಧ್ಯಾನಯೋಗ ಸಂಜೆ ೬.೩೦ ರಿಂದ ೭.೩೦ ವರೆಗೆ ಪ್ರವಚನ ನಡೆಸಿಕೊಡಲಿದ್ದಾರೆ.

