ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಿತ್ತೂರು ಚೆನ್ನಮ್ಮ ವಿಜಯೋತ್ಯೋತ್ಸವದ ಅಂಗವಾಗಿ ಅ.೨೩ರಂದು ಶಾಂತಿನಿಕೇತನ ಪ್ರಾಥಮಿಕ ಪ್ರೌಢಶಾಲೆ ಆಶ್ರಮ ರಸ್ತೆ ವಿಜಯಪುರದ ಸಭಾಂಗಣದಲ್ಲಿ ಚೆನ್ನಮ್ಮ ವಿದ್ಯಾವರ್ಧಕ ಸಂಸ್ಥೆ ಉತ್ನಾಳ, ಈ ಸಂಸ್ಥೆಯಿಂದ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟನೆ ಆಯಿತು,
ಎಲ್ಲ ಅತಿಥಿಗಳೊಂದಿಗೆ ಸಸಿಗೆ ನೀರೆರೆಯುವ ಮೂಲಕ ಮತ್ತು ಚೆನ್ನಮ್ಮಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಾಯಿತು
ಕಾರ್ಯಕ್ರಮದ ಸಾನಿಧ್ಯ ಡಾ.ಶ್ರದ್ದಾನಂದ ಸ್ವಾಮೀಜಿ, ಶಿವಾನಂದ ಮಠ ಸದಲಗಾ ವಹಿಸಿದ್ದರು.
ಅಧ್ಯಕ್ಷರಾಗಿ ಪ ಗು ಸಿದ್ದಾಪುರ ಮಕ್ಕಳ ಸಾಹಿತಿ ಮುಳವಾಡ, ಮುಖ್ಯ ಅತಿಥಿಗಳಾಗಿ ಬಸವರಾಜ್ ಯಲಿಗಾರ, ಡಿಎಸ್ಪಿ ವಿಜಯಪುರ, ಅತಿಥಿಗಳಾಗಿ ಡಾ, ಸುರೇಶ್ ಬಿರಾದಾರ, ಚೇರ್ಮನ್ನರು ಶಾಂತಿನಿಕೇತನ ಶಿಕ್ಷಣ ಸಮೂಹ ಸಂಸ್ಥೆ ವಿಜಯಪುರ, ರಾಜಶೇಖರ್ ದೈವಾಡಿ, ಕಚೇರಿ ಅಧ್ಯಕ್ಷರು ಸಹಾಯಕ ನಿರ್ದೇಶಕರು (ಗ್ರೇಡ್ ಒನ್ ) ಸಮಾಜ ಕಲ್ಯಾಣ ಇಲಾಖೆ, ಇಂಡಿ, ಮತ್ತು ಸಹಾಯಕ ನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ, ಸಂಸ್ಥೆಯ ಅಧ್ಯಕ್ಷ ಬಸವರಾಜ ನಂ ಬಾಗೇವಾಡಿ, ಸಾ ಉತ್ನಾಳ, ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ತಂಗ್ಗೆವ್ವ ಬಾಗೇವಾಡಿ, ಪ್ರಧಾನ ಕಾರ್ಯದರ್ಶಿ, ಶ್ರೀಮತಿ ಸುರೇಖಾ ಬಾಗಲಕೋಟ ವೇದಿಕೆಯಲ್ಲಿದ್ದರು
ರಾಜ್ಯ ಮಟ್ಟದ ೨೧ ಸಾಧಕರಿಗೆ ಕೆಳದಿ ರಾಣಿ ಚನ್ನಮ್ಮ ಪ್ರಶಸ್ತಿ ಹಾಗೂ ೧೮ ಸಾಧಕರಿಗೆ ಬೆಳವಡಿ ರಾಣಿ ಮಲ್ಲಮ್ಮ ಪ್ರಶಸ್ತಿ ಹಾಗೂ ಜೀವಮಾನ ಸಾಧನೆಗಾಗಿ ೧೩ ಸಾಧಕರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಶ್ರೀಮತಿ ಜ್ಯೋತಿ ಬಾಗೇವಾಡಿ ನಿರೂಪಿಸಿ, ವಂದಿಸಿದರು.

