ಬಂಜಾರ ಆಭರಣ ತಯಾರಿಕಾ ಕಾರ್ಯಾಗಾರದಲ್ಲಿ “ಡಿಜಿಟಲ್ ಯುಗದಲ್ಲಿ ಮಾರ್ಕೆಟಿಂಗ್ ತಂತ್ರಗಳು” ವಿಷಯ ಕುರಿತು ಉಪನ್ಯಾಸ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಾಂಪ್ರದಾಯಿಕವಾಗಿ ತಯಾರಿಸುವ ಆಭರಣಗಳನ್ನು ಹೇಗೆ ಆಧುನಿಕರಣಕ್ಕೆ ಸಂಬಂಧಿಸಿದಂತೆ ಮತ್ತು ಬೇಡಿಕೆಗಳ ಅನುಗುಣವಾಗಿ ಹೇಗೆ ತಯಾರಿಸಬೇಕು ಎಂಬುದನ್ನು ತಿಳಿಯಬೇಕು. ಇಂದಿನ ದಿನಗಳಲ್ಲಿ ಆನ್‌ಲೈನ್ ಮಾರ್ಕೆಟಿಂಗ್ ಬಹಳ ಪ್ರಮುಖ ಪಾತ್ರವಹಿಸುತ್ತಿದೆ. ತಯಾರಿಸಿದ ಆಭರಣಗಳು ನೇರವಾಗಿ ಮಾರುಕಟ್ಟೆಗೆ ಹೋಗಬೇಕೆಂದರೆ ಮತ್ತು ಅದರ ನೇರ ಲಾಭ ಪಡೆಯಬೇಕೆಂದರೆ ಆನ್‌ಲೈನ್ ಮಾರ್ಕೆಟಿಂಗ್‌ನ್ನು ತಿಳಿದಿರಬೇಕು ಎಂದು ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಡಾ.ಚಂದ್ರಶೇಖರ್ ಮಠಪತಿ ಹೇಳಿದರು.
ರವಿವಾರ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಬೆಂಗಳೂರು ಹಾಗೂ ಗ್ರಾಮ ಪಂಚಾಯತ್, ಬರಟಗಿ ಸಹಕಾರದೊಂದಿಗೆ “೧೦ ದಿನಗಳ ಬಂಜಾರ ಆಭರಣ ತಯಾರಿಕಾ ಕಾರ್ಯಾಗಾರ” ದಲ್ಲಿ ಅವರು “ಡಿಜಿಟಲ್ ಯುಗದಲ್ಲಿ ಮಾರ್ಕೆಟಿಂಗ್ ತಂತ್ರಗಳು” ಎಂಬ ವಿಷಯ ಕುರಿತು ಮಾತನಾಡಿದರು.
ಫೇಸ್‌ಬುಕ್, ವಾಟ್ಸ್ಪ್, ಅಮೇಜಾನ್, ಫ್ಲಿಪ್‌ಕಾರ್ಟ್ ಮುಂತಾದವುಗಳಲ್ಲಿ ಹೇಗೆ ಸೇಲ್‌ರ್ ಅಕೌಂಟ್ ಒಪನ್ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿದ ಅವರು, ಪ್ರಾದೆಶೀಕವಾಗಿ ಮಾರುಕಟ್ಟೆ ಮಳಿಗೆಗಳಿಗೆ ಬೇಟಿ ನೀಡಬೇಕು ಮತ್ತು ಪ್ರದರ್ಶನ ಮಳಿಗೆಗಳನ್ನು ಹಾಕಿಕೊಳ್ಳಬೇಕು. ತಯಾರಿಸಿದ ವಸ್ತುಗಳ ಒಳ್ಳೆಯ ಗುಣಮಟ್ಟದ ಕ್ಯಾಮರಾಗಳನ್ನು ಬಳಿಸಿ ಒಳ್ಳೆಯ ರೀತಿಯಲ್ಲಿ ಪೋಟೋ ತಗೆದು ಆನ್‌ಲೈನ್ ಅಪ್‌ಲೋಡ ಮಾಡಬೇಕು. ಅಷ್ಟೆ ಅಲ್ಲದೇ ತಮ್ಮದೇ ಆದ ಸೊಸೈಟಿಯನ್ನು ನೊಂದಣಿ ಮಾಡಿಕೊಂಡು ಕೆಲಸ ಮಾಡಿದರೆ ಅತ್ಯಂತ ಲಾಭ ಪಡೆಯಬಹುದು ಎಂದು ತಿಳಿಸಿದರು.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡಮಿ ಸದಸ್ಯೆ ಡಾ.ಸುರೇಖಾ ಜಿ ರಾಠೋಡ ಸ್ವಾಗತಿಸಿದರು.
ವಿನೋದ ಕಿಷನ್ ಪತ್ತಾರ, ಸಾಂಪ್ರದಾಯಿಕ ಆಭರಣ ತಯಾರಕರು ವಂದನಾರ್ಪಣೆ ಮಾಡಿದರು.
ಕಲ್ಯಾಣ ಸಿಂಗ ಹಜೆರಿ, ಕಿಷನ್ ಪತ್ತಾರ್, ಅಜೀತ್ ಪತ್ತಾರ್, ಮನ್ನು ಬಾಬು ಪತ್ತಾರ್, ಬಾಬು ಪತ್ತಾರ್ ಮತ್ತು ಎಲ್ಲಾ ಶಿಬಿರಾರ್ಥಿಗಳು ಹಾಜರಿದ್ದರು.

