ಮುದ್ದೇಬಿಹಾಳ: ದಲಿತ ವಿರೋಧಿ ಜನ ವಿರೋಧಿ ಬಿಜೆಪಿ ಸರಕಾರವನ್ನು ತಿರಸ್ಕರಿಸಿ ನಿಜವಾದ ಸಮಾಜಿಕ ಹಾಗೂ ದೀನ ದಲಿತರ ಪರವಾದ ಕಾಳಜಿಯುಳ್ಳÀ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಲು ತಾಳಿಕೋಟಿ ಹಾಗೂ ಮುದ್ದೇಬಿಹಾಳ ಸೇರಿದಂತೆ ಮತಕ್ಷೇತ್ರದ ಎಲ್ಲ ಚಲವಾದಿ ಸಮಾಜ ತೀರ್ಮಾನಿಸಿದೆ ಎಂದು ತಾಳಿಕೋಟೆ ತಾಲೂಕಾ ಚಲವಾದಿ ಸಮಾಜದ ಅಧ್ಯಕ್ಷ ಮುತ್ತಣ್ಣ ಚಮಲಾಪೂರ ಹಾಗೂ ಮುದ್ದೇಬಿಹಾಳ ತಾಲೂಕಾ ಅಧ್ಯಕ್ಷ ರೇವಣೆಪ್ಪ ಅಜಮನಿ ತಿಳಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಖಾಸಗಿ ಹೋಟೇಲ್ ಸಭಾಭವನದಲ್ಲಿ ಶನಿವಾರ ನಡೆದ ಮತಕ್ಷೇತ್ರದ ಚಲವಾದಿ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು ಮತಕ್ಷೇತ್ರದಲ್ಲಿ ೨೫ ಸಾವಿರಕ್ಕಿಂತ ಹೆಚ್ಚು ಚಲವಾದಿ ಸಮುದಾಯವರ ಮತದಾರರಿದ್ದಾರೆ. ಆದರೆ ಬಿಜೆಪಿಯವರು ನಮ್ಮ ಸಮೂದಾಯವನ್ನು ಸಂಪೂರ್ಣ ಕಡೆಗಣಿಸಿದ್ದರಿಂದ ಮತಕ್ಷೇತ್ರದ ಎಲ್ಲ ಬಾಂಧವರು ಒಗ್ಗಟ್ಟಾಗಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಳೆದ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರ ದಲಿತರ ಶ್ರೇಯೋಭಿವೃದ್ಧಿಗಾಗಿ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆ ಜಾರಿಗೊಳಿಸಿತ್ತು. ಆದರಿಂದು ಸ್ಥಳೀಯ ಬಿಜೆಪಿ ಶಾಸಕರು ನಿಜವಾದ ದಲಿತ ಕೇರಿಗಳನ್ನು ಅಭಿವೃದ್ಧಿಗೊಳಿಸದೇ ಸಾಮಾನ್ಯ ಕ್ಷೇತ್ರಗಳಲ್ಲಿ ಕಾಮಗಾರಿ ನಡೆಸುವಂತೆ ಮಾಡಿ ಈ ಯೋಜನೆ ದುರುಪಯೋಗ ಪಡಿಸಿಕೊಂಡಿದ್ದಾರೆ. ಅಲ್ಲದೇ ನಿಜವಾದ ದಲಿತ ಸಮುದಾಯವಾದ ಚಲವಾದಿ ಸಮುದಾಯದ ಸಣ್ಣ ಸಣ್ಣ ಗುತ್ತಿಗೆದಾರರಿಗೆ ಕಾಮಗಾರಿ ನೀಡದಂತೆ ನೋಡಿಕೊಂಡಿದ್ದಾರೆ. ಅದರಂತೆ ದಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆಯವರನ್ನು ಕಾಂಗ್ರೇಸ್ ಪಕ್ಷದ ರಾಷ್ಟಿçÃಯ ಅಧ್ಯಕ್ಷರನ್ನಾಗಿ ಮಾಡಿ ಚಲವಾದಿ ಸಮುದಾಯಕ್ಕೆ ಗೌರವ ನೀಡಿದೆ. ಅಲ್ಲದೆ ಸಿ.ಎಸ್.ನಾಡಗೌಡರ ಒಳ್ಳೆಯ ಸ್ವಭಾವ ಮತ್ತು ಸಮಾನತೆ ಭಾವನೆಯನ್ನು ಮೆಚ್ಚಿ ಈ ಬಾರಿ ಮತಕ್ಷೇತ್ರದ ಚಲವಾದಿ ಸಮಾಜ ಕಾಂಗ್ರೇಸ್ ಬೆಂಬಲಿಸಲು ತಿರ್ಮಾನಿಸಿದೆ ಎಂದರು.
ಈ ವೇಳೆ ಮುಖಂಡರಾದ ವಾಯ್.ಎಚ್.ವಿಜಯಕರ, ನಿವೃತ್ತ ಎಸ್‌ಪಿ ಎಸ್.ಆರ್.ಕಟ್ಟಿಮನಿ, ಚನ್ನಪ್ಪ ವಿಜಯಕರ, ಶ್ರೀಕಾಂತ ಚಲವಾದಿ, ವಾಯ್.ವಾಯ್.ಚಲವಾದಿ, ಶಿವು ಶಿವಪುರೆ, ಶೇಖರ ಕಟ್ಟಿಮನಿ, ಶರಣು ಚಲವಾದಿ, ಮುತ್ತಣ್ಣ ಚಲವಾದಿ, ಪ್ರಶಾಂತ ಕಾಳೆ, ವಿಕ್ರಮ ಚಲವಾದಿ, ಹಣಮಂತ ನೆರಬೆಂಚಿ, ಮಂಜು ಗುಂಡಕರ್ಜಗಿ, ಪ್ರಕಾಶ ಸರೂರ, ಅಜೀತ ಚೊಂಡಿ, ಬಸವರಾಜ ಬಿಜಾಪೂರ, ಮುತ್ತು ಕಪನೂರ, ಚಂದ್ರಶೇಖರ ಅಜಮನಿ, ಅರುಣ ತಿಳಗೊಳ, ಕಿರಣ ಚಲವಾದಿ, ಸಂಗಮೇಶ ನೇಬಗೇರಿ ಸೇರಿದಂತೆ ಮತ್ತೀತರರು ಇದ್ದರು.