ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಮುದ್ದೇಬಿಹಾಳ ರಸ್ತೆಯಲ್ಲಿರುವ ಕುಂಟೋಜಿ ಪೆಟ್ರೋಲ್ ಪಂಪ್ ಎದುರಿಗೆ ಇದ್ದ ಟೀ ಪಾಯಿಂಟ್ ಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಶುಕ್ರವಾರ ವ್ಯಕ್ತಿಯೊರ್ವ ಮೃತ ಪಟ್ಟ ಘಟನೆ ಜರುಗಿದೆ.
ಮೃತ ದುರ್ದೈವಿ ಕಾಸೀಂಸಾಬ ಮಲ್ಲಿಕಸಾಬ ನದಾಫ್(೫೧) ಅವರು ಟೀ ಪಾಯಿಂಟ್ ನಡೆಸುತ್ತಿದ್ದರು. ಎಂದಿನಂತೆ ಟೀ ಪಾಯಿಂಟ್ಚ ನಡೆಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಟೀ ಪಾಯಿಂಟ್ ಗೆ (ಕಬ್ಬಿಣದ ತಳ್ಳಗಗಾಡಿ) ವಿದ್ಯುತ್ ತಗುಲಿದ ಪರಿಣಾಮ ವ್ಯಕ್ತಿ ಮೃತ ಪಟ್ಟಿದ್ದಾನೆ. ಸ್ಥಳಕ್ಕೆ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಪಿಐ ಗುರುಶಾಂತ ದಾಶ್ಯಾಳ, ಪಿಎಸ್ಐಗಳಾದ ಐ.ಎಂ.ದುಂಡಸಿ, ವಿನೋದ ಪೂಜಾರಿ ಭೇಟಿ ನೀಡಿ ಪರಿಶೀಲಿಸಿದರು.
ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
