ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೪-೨೫ನೇ ಸಾಲಿನ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆ ಮಾಡುವುದಕ್ಕಾಗಿ ಸೆಪ್ಟೆಂಬರ್ ೨೬ರಂದು ಸೋಲಾಪೂರ ಬೈಪಾಸ ಭರಟಗಿ ರೋಡ ಸರಸ್ವತಿ ಸ್ಕೂಲ್ ಹತ್ತಿರ ಪುರುಷ ಹಾಗೂ ಮಹಿಳಾ ಸೈಕ್ಲಿಂಗ್ ಕ್ರೀಡಾಪಟುಗಳ ಆಯ್ಕೆ ಪ್ರಕಿಯೆ ನಡೆಯಲಿದೆ.
ಭಾಗವಹಿಸುವ ಸೈಕ್ಲಿಂಗ್ ಕ್ರೀಡಾಪಟುಗಳು ನೇರವಾಗಿ ಬೆಳಿಗ್ಗೆ ೬ ಗಂಟೆಗೆ ಜಿಲ್ಲಾ ಕ್ರಿಡಾ ವಸತಿ ನಿಲಯದಲ್ಲಿ ವರದಿ ಮಾಡಿಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ:೯೪೪೮೨೩೪೮೮೩, ೯೭೪೨೪೯೮೬೪೫ಕ್ಕೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
