ಉದಯರಶ್ಮಿ ದಿನಪತ್ರಿಕೆ
ಢವಳಗಿ: ತಾಳಿಕೋಟಿ ತಾಲೂಕಿನ ಮೈಲೇಶ್ವರ ಗ್ರಾಮದ ಬ್ರೀಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಡ ಶಾಲೆಯಲ್ಲಿ ಸೆ.20 ನಡೆದ ಕ್ರೀಡಾಕೂಟದಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದ ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು 400 ಮೀಟರ್ ಓಟ, ಉದ್ದ ಜಿಗಿತ, ಮತ್ತು ಎತ್ತರ ಜಿಗಿತದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಎತ್ತರ ಜಿಗಿತದಲ್ಲಿ ಭಾಗವಹಿಸಿದ ಮಾರುತಿ ನಾಗರಬೆಟ್ಟ ಅವರು ದ್ವೀತಿಯ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗುವುದರ ಮುಖಾಂತರ ಗ್ರಾಮದ ಮತ್ತು ಶಾಲೆಯ ಕೀರ್ತಿ ತಂದಿರುತ್ತಾನೆ. ಮತ್ತು 400 ಮೀಟರ್ ಓಟದಲ್ಲಿ ಸಂಗಮೇಶ ಯಾಳವಾರ ತೃತೀಯ ಸ್ಥಾನ ಪಡೆದಿರುತ್ತಾನೆ. ಹಾಗೂ ಉದ್ದ ಜಿಗಿತದಲ್ಲಿ ಭಾಗವಹಿಸಿದ ನಿಂಗನಗೌಡ ಕರಡ್ಡಿ ಸೇರಿದಂತೆ ಮೂವರು ವಿದ್ಯಾರ್ಥಿಗಳಿಗೆ ಶನಿವಾರದಂದು ಮುಂಜಾನೆ ಶಾಲಾ ಸಮಯದಲ್ಲಿ ಶಾಲೆಯ ಮುಖ್ಯ ಗುರು ರಮೇಶ ಮೂಲಿಮನಿ ಮತ್ತು ತಾರನಾಳ ಶಾಲೆಯ ಮುಖ್ಯ ಗುರುಗಳಾದ ಡಿ ಬಿ ಬಿರಾದಾರ ಹಾಗೂ ಸಹ ಶಿಕ್ಷಕರು ಸೇರಿ ಸನ್ಮಾನಿಸಿ ಗೌರವಿಸಿದರು.
ಇದೇ ವೇಳೆಯಲ್ಲಿ ಸಹ ಶಿಕ್ಷಕರಾದ ಜೆ ಎಸ್ ಪಾಟೀಲ, ಬಿ ಎಸ್ ಪಾಟೀಲ, ಎಸ್ ಬಿ ಬಿರಾದಾರ, ಎಸ್ ಎಸ್ ಅವಟಿ, ಹರಿನಾಥ ಎನ್, ಹಾಗೂ ಅತಿಥಿ ಶಿಕ್ಷಕರಾದ ಪರಶುರಾಮ ಮೂಲಿಮನಿ, ಬಿಬಿ ಫಾತಿಮಾ ಹಾಗೂ ಬಿಸಿಯೂಟದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

